LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇಂದು ರಾಜ್ಯದ 118 ಸ್ಥಳದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ 

Advertisement

ಬೆಂಗಳೂರು: 'ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಪಥಸಂಚಲನ ನಡೆಸಬೇಕೆಂದರೆ ಅನುಮತಿ ಕೇಳಬೇಕೇ ವಿನಃ, ಮಾಹಿತಿ ನೀಡುವುದಿಲ್ಲ. ಒಮ್ಮೆ ಅರ್ಜಿ ಸಲ್ಲಿಸಿ ಕಾಯಲಿ ಬಳಿಕ ಒಪ್ಪಿಗೆಗೆ ಕಾಯಿರಿ' ಎಂಬುದಾಗಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ ಬೆನ್ನಲ್ಲೇ ವಿಜಯದಶಮಿ ನಿಮಿತ್ತ ರಾಜ್ಯದ ಹಲವು ಕಡೆ ಪಥಸಂಚಲನಕ್ಕೆ ಅನುಮತಿ ಪೊಲೀಸ್‌ ಠಾಣೆಗಳಲ್ಲಿ ಅನುಮತಿ ಕೋರಿ ಆರೆಸ್ಸೆಸ್‌ ಅರ್ಜಿ ಸಲ್ಲಿಸಿತ್ತು.ಈ ಬೆನ್ನಲ್ಲೇ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಪ್ರತಿ ವರ್ಷವೂ ವಿಜಯದಶಮಿ ವೇಳೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನ ನಡೆಸುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಹಲವು ಷರತ್ತುಗಳನ್ನು ವಿಧಿಸಿ ಪಥಸಂಚಲನಕ್ಕೆ ಅನುಮತಿ ಕೊಡಲಾಗಿದೆ. ಅಲ್ಲದೆ, ಆಯಾ ಜಿಲ್ಲೆಗಳ ಪರಿಸ್ಥಿತಿಯನ್ನು ನೋಡಿಕೊಂಡು ಷರತ್ತಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ 100 ಕಡೆ ಪಥಸಂಚಲನ: ಬೆಂಗಳೂರಿನಾದ್ಯಂತ ಪಥಸಂಚಲನ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆಗಳು ನಡೆದಿವೆ. ಬೆಂಗಳೂರಿನಲ್ಲಿ 100 ಕಡೆ ಸಂಘದ ಪಥಸಂಚಲನ ನಡೆಸಲಾಗುತ್ತಿದೆ ಎಂದು ಆರ್‌ಎಸ್‌ಎಸ್‌ ಮಾಹಿತಿ ನೀಡಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST