ಮೈಸೂರ: ಕರ್ನಾಟಕ ಹಾಗೂ ತ್ರಿಪುರ ಕ್ರಿಕೆಟ್ ತಂಡಗಳ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯ ನಾಳೆ ಅ. 26 ರಿಂದ 29 ರವರೆಗೆ ನಡೆಯಲಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಾಳೆ ಮುಂಜಾನೆ 9:30 ರಿಂದ ಶುರುವಾಗಲಿದೆ.
ಗೆಲುವು ಅನಿವಾರ್ಯ: ಕರ್ನಾಟಕ ತಂಡವು ಆಂದ್ರ ಪ್ರದೇಶ್ ಹಾಗೂ ಸೌರಾಷ್ಟ್ರ ವಿರುದ್ಧದ ಮೊದಲ ಎರಡೂ ಲೀಗ್ ಪಂದ್ಯಗಳಲ್ಲಿ ಕಳಪೆ ಪ್ರದರ್ಸನ ನೀಡಿದ್ದು, ಎರಡೂ ಪಂದ್ಯಗಳನ್ನೂ ಡ್ರಾ ಮಾಡಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ. ಹೀಗಾಗಿ ಕರ್ನಾಟಕದ ಬಳಿ ಈಗ ಎರಡು ಅಂಕಗಳು ಮಾತ್ರ ಇದ್ದು, ನಾಳೆಯಿಂದ ಶುರುವಾಗುವ ಪಂದ್ಯದಲ್ಲಿ ಗೆಲ್ಲುವುದು ರಾಜ್ಯ ತಂಡಕ್ಕೆ ಅನಿವಾರ್ಯವಾಗಿದೆ.


