ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ಮಣ್ಣಿನ ಸ್ನಾನದ ವಿಶೇಷ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮೌನ ಮಿತ್ರ ಯೋಗ ಸಮಿತಿಯ ಯೋಗಗುರು ಹಾಗೂ ಪ್ರಕೃತಿ ಚಿಕಿತ್ಸಕರಾದ ಮೌನೇಶ್ ಪೋತ್ನಾಳ್ ಯೋಗಾಭ್ಯಾಸ, ಪ್ರಕೃತಿ ಚಿಕಿತ್ಸೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಪ್ರತಿಯೊಬ್ಬರೂ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿ ಆಧಾರಿತ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಇಂತಹ ಪ್ರಾಚೀನ ಚಿಕಿತ್ಸಾ ವಿಧಾನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯೋಗಾಭ್ಯಾಸದ ಜೊತೆಗೆ ಮಣ್ಣಿನ ಸ್ನಾನದ ಮಹತ್ವವನ್ನು ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿ ತಮ್ಮ ದೇಹಕ್ಕೆ ಮಣ್ಣನ್ನು ಲೇಪಿಸಿಕೊಂಡು ಮಣ್ಣಿನ ಸ್ನಾನ ಮಾಡುವ ಮೂಲಕ ಪ್ರಕೃತಿ ಚಿಕಿತ್ಸೆಯ ಅನುಭವ ಪಡೆದರು.
ಈ ಸಂದರ್ಭದಲ್ಲಿ ಡಾ. ರಾಜೇಂದ್ರ ಬೆನಕನಾಳ್ ಜಿ. ನಾಗರಾಜ್ ಲಿಂಗರಾಜ ಗಡಿಗಿ ಮಹಾಂತೇಶ ಸ್ವಾಮಿ ರೌಡರ್ ಶ್ರೀಶೈಲ ಗೌಡರು, ಚಂದ್ರಮೌಳೇಶ್ವರ ಚಂದ್ರಶೇಖರ್ ಚೀಕಲಪರ್ವಿ ನಿವೃತ್ತ ಪಿ.ಎಸ್.ಐ. ವೀರನಗೌಡ ನಾಗರಾಜ್ ಭಂಡಾರಿ ಶ್ರೀನಿವಾಸ, ನೀಲಕಂಠಪ್ಪ ಎಂ. ಪ್ರಿಯಂಬಕೇಶ ರಾಮು ರಾಮಕೃಷ್ಣ ರೆಡ್ಡಿ, ವೆಂಕಟೇಶ ಮದ್ಲಾಪುರ ಸುರೇಶ್ ಕೊಟ್ನೆಕಲ್ ಶರಣಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಆಂಜನೇಯ ನಸಲಾಪುರ


