ಗುವಾಹತಿ: ಕರ್ನಾಟಕ ಕ್ರಿಕೆಟ್ ತಂಡವು ಅಸ್ಸಾಮ್ ವಿರುದ್ಧ ಇಂದಿಲ್ಲಿ ಆರಂಭವಾಗಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4 ನೇ ಲೀಗ್ ಪಂದ್ಯದ ಮೊದಲ ದಿನವೇ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
ಇಲ್ಲಿನ ಬರಸ್ಪರಾ ಕ್ರಿಕೆಟ್ ಮೈದಾನದಲ್ಲಿ ಮೊದಲ ದಿನದ ಆಟ ಮುಗಿದಾಗ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ಗೆ 180 ರನ್ ಗಳಿಸಿತ್ತು.
ಅಸ್ಸಾಮ್ ತಂಡವನ್ನು 135 ರನ್ ಗಳಿಗೆ ಆಲ್ ಔಟ್ ಮಾಡಿದ್ದ ಕರ್ನಾಟಕ ಮೊದಲ ದಿನದ ಅಂತ್ಯಕ್ಕೆ 45 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು.
ಸ್ಕೊರ್ ವಿವರ
ಅಸ್ಸಾಮ್ ಮೊದಲ ಇನ್ನಿಂಗ್ಸ್ 135
ಎಸ್. ಎ. ರಾಯ್ 37. ಆರ್. ಭಟ್ಕಳ್ 35 ಕ್ಕೆ 5, ಎಸ್. ಶೆಟ್ಟಿ 53 ಕ್ಕೆ 5
ಕರ್ನಾಟಕ ಮೊದಲ ಇನ್ನಿಂಗ್ಸ್ 2 ವಿಕೆಟ್ ಗೆ 180
ರೋಹನ್ ಪಾಟೀಲ್ 89 (87 ಎಸೆತ, 13 ಬಾಂಡ್ರಿ, 1 ಸಿಕ್ಸರ್)
ಮಯಂಕ್ ಅಗರವಾಲ್ (ಬ್ಯಾಟಿಂಗ್) 57 (95 ಎಸೆತ, 7 ಬಾಂಡ್ರಿ.


