ನವದೆಹಲಿ: ಅಯೋಧ್ಯೆಯ ಶ್ರೀ ರಾಮಮಂದಿರ ದೇಣಿಗೆ ಹಣದಲ್ಲಿ ಸುಮಾರು 2.7 ಕೋಟಿ ರೂಪಾಯಿ ದುರುಪಯೋಗ (ಕಳ್ಳತನ) ಆಗಿರುವುದು ವಿಶೇಷ ತನಿಖಾ ತಂಡದ (SIT) ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ವಿಚಾರಣಾ ನ್ಯಾಯಾಲಯಕ್ಕೆ ಎಸ್ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದ ಮೇಲೆ ವಾದ ಮಂಡಿಸಿದ ಅವರು, ಕಳ್ಳತನ ಮಾಡಿದ ದೇಣಿಗೆ ಹಣದಿಂದ ಆರೋಪಿಗಳು ವಿವಿಧೆಡೆ ಆಸ್ತಿ ಮತ್ತು ಚಿನ್ನವನ್ನು ಖರೀದಿಸಿ ಹೂಡಿಕೆ ಮಾಡಿರುವುದು ಹಾಗೂ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವುದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ವಿವರಿಸಿದರು.
ಆದಾಗ್ಯೂ, ಮಂದಿರಕ್ಕೆ ಭಕ್ತರು ನೀಡಿದ ಐತಿಹಾಸಿಕ ಕಲಾಕೃತಿಗಳು, ಅಪರೂಪದ ವಸ್ತುಗಳು ಹಾಗೂ ಇತರ ಪ್ರಮುಖ ಕಾಣಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಎಸ್ಐಟಿ ಸ್ಪಷ್ಟಪಡಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ದುರುಪಯೋಗಪಡಿಸಿಕೊಂಡ ಹಣ ಹಾಗೂ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.


