ಕಾಸರಗೋಡು: ಟಿಕೆಟ್ ರದ್ದುಗೊಳಿಸಿದಾಗ ಕೇವಲ ₹1 ಹಣವನ್ನು (Railways) ಮರುಪಾವತಿಸಲು ನಿರ್ಲಕ್ಷ್ಯ ವಹಿಸಿದ ಐಆರ್‌ಸಿಟಿಸಿ (IRCTC) ಸಂಸ್ಥೆಗೆ ಕಾಸರಗೋಡು ಜಿಲ್ಲಾ ಗ್ರಾಹಕ ಆಯೋಗವು (Consumer Court) ₹3,101 ದಂಡ ವಿಧಿಸಿದೆ.
ನಿಯಮಾನುಸಾರ ನೀಡಬೇಕಿದ್ದ ರಿಫಂಡ್ (Ticket Refund) ಮೊತ್ತದಲ್ಲಿ 1 ರೂಪಾಯಿ ಕಡಿಮೆ ನೀಡಿ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿದ್ದಕ್ಕೆ ಗ್ರಾಹಕ ನ್ಯಾಯಾಲಯ ಈ ಬಿಸಿ ಮುಟ್ಟಿಸಿದೆ.
ಕೇರಳದ ಕಾಸರಗೋಡು ನಿವಾಸಿ ರಂಜಿತ್ ಕುಮಾರ್ ಕೆ.ವಿ. ಎಂಬುವರು IRCTC ವೆಬ್‌ಸೈಟ್ ಮೂಲಕ ಕಾಸರಗೋಡಿನಿಂದ ತಿರುವನಂತಪುರಕ್ಕೆ AC 3-Tier ಟಿಕೆಟ್‌ಗೆ ₹553 ಪಾವತಿಸಿ ಬುಕ್ ಮಾಡಿದ್ದರು.
ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಪ್ರಯಾಣದ 48 ಗಂಟೆಗೂ ಮೊದಲೇ ನಿಯಮಾನುಸಾರ ಟಿಕೆಟ್ ರದ್ದುಗೊಳಿಸಿದ್ದರು. ನಿಯಮಗಳ ಪ್ರಕಾರ ಅವರಿಗೆ ₹341 ವಾಪಸ್ ಬರಬೇಕಿತ್ತು. ಆದರೆ ಐಆರ್‌ಸಿಟಿಸಿ ಖಾತೆಗೆ ₹340 ಮಾತ್ರ ಜಮಾ ಮಾಡಿ, ₹1 ಬಾಕಿ ಉಳಿಸಿಕೊಂಡಿತ್ತು.
ಬಾಕಿ ಉಳಿದ 1 ರೂಪಾಯಿಗಾಗಿ ರಂಜಿತ್ ಕುಮಾರ್ ಅವರು IRCTC ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿದರೂ ಯಾವುದೇ ಸೂಕ್ತ ಸ್ಪಂದನೆ ಸಿಗಲಿಲ್ಲ. ಇದು ಕೇವಲ 1 ರೂಪಾಯಿಯ ವಿಷಯವಲ್ಲ, ಪ್ರತಿದಿನ ರದ್ದಾಗುವ ಲಕ್ಷಾಂತರ ಟಿಕೆಟ್‌ಗಳಲ್ಲಿ ಪ್ರತಿಯೊಂದರಲ್ಲೂ 1 ರೂಪಾಯಿ ಕಡಿತಗೊಳಿಸಿದರೆ ಕೋಟ್ಯಂತರ ರೂಪಾಯಿ ವ್ಯತ್ಯಾಸವಾಗುತ್ತದೆ ಎಂಬ ತತ್ತ್ವಕ್ಕೆ ಬದ್ಧರಾಗಿ ಅವರು ಕಾಸರಗೋಡು ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದರು
ಒಟ್ಟಾರೆಯಾಗಿ, 1 ರೂಪಾಯಿ ಬಾಕಿ ಉಳಿಸಿಕೊಂಡಿದ್ದಕ್ಕೆ IRCTC ಸಂಸ್ಥೆಯು ಈಗ ₹3,101 ಮೊತ್ತವನ್ನು ದಂಡ ಹಾಗೂ ಪರಿಹಾರದ ರೂಪದಲ್ಲಿ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನಿಯಮಿತ ಅವಧಿಯಲ್ಲಿ ಪಾವತಿಸದಿದ್ದಲ್ಲಿ ಹೆಚ್ಚುವರಿ ಬಡ್ಡಿ ಅನ್ವಯವಾಗಲಿದೆ ಎಂದು ಆಯೋಗ ಎಚ್ಚರಿಸಿದೆ.


