ನವದೆಹಲಿ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder) ದರವನ್ನು ₹10 ರಿಂದ ₹17 ರವರೆಗೆ ಹೆಚ್ಚಿಸಿವೆ. ಇದರ ಬೆನ್ನಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಸಿಎನ್‌ಜಿ ದರದಲ್ಲೂ ಏರಿಕೆಯಾಗಿದೆ
ಆದರೆ ಬಹುತೇಕ ನಗರಗಳಲ್ಲಿ ಪೈಪ್ಡ್ ನೈಸರ್ಗಿಕ ಅನಿಲ (PNG) ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹೊಸ ದರಗಳು ನವೆಂಬರ್ 2, 2026 ರಿಂದಲೇ ಜಾರಿಗೆ ಬಂದಿವೆ.
ಮಹಾನಗರ ಗ್ಯಾಸ್ ಲಿಮಿಟೆಡ್ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ ₹1 ಹೆಚ್ಚಿಸಿದ್ದು, ಪ್ರಸ್ತುತ ದರ ₹90 ಕ್ಕೆ ತಲುಪಿದೆ.
ಗ್ರೀನ್ ಗ್ಯಾಸ್ ಲಿಮಿಟೆಡ್ ಉತ್ತರ ಪ್ರದೇಶದ ಐದು ನಗರಗಳಲ್ಲಿ ದರ ಪರಿಷ್ಕರಣೆ ನಡೆಸಿದ್ದು, ಲಖನೌ ಮತ್ತು ಆಗ್ರಾಗಳಲ್ಲಿ ₹108 ಕ್ಕೆ ಏರಿದೆ. ಉನ್ನಾವೊದಲ್ಲಿ ಗರಿಷ್ಠ ₹2.25 ಹೆಚ್ಚಳವಾಗಿ ₹106 ಕ್ಕೆ ತಲುಪಿದ್ದರೆ, ಅಯೋಧ್ಯೆ ಮತ್ತು ಸುಲ್ತಾನ್‌ಪುರದಲ್ಲಿ ದರ ₹106 ಆಗಿದೆ.
ಅದಾನಿ ಟೋಟಲ್ ಗ್ಯಾಸ್ ಕೂಡ ಗರಿಷ್ಠ ₹4.45 ರವರೆಗೆ ದರ ಏರಿಸಿದ್ದು, ಅಹಮದಾಬಾದ್‌ನಲ್ಲಿ ₹98.47, ಫರಿದಾಬಾದ್‌ನಲ್ಲಿ ₹102.60, ಜಲಂಧರ್‌ನಲ್ಲಿ ₹100 ಹಾಗೂ ಬೆಂಗಳೂರು, ಭರತ್‌ಪುರ ಮತ್ತು ದೇವಾಸ್‌ಗಳಲ್ಲಿ ಪ್ರತಿ ಕೆಜಿಗೆ ₹1 ಹೆಚ್ಚಳದೊಂದಿಗೆ ₹99 ಆಗಿದೆ. ಮೀರತ್‌ನಲ್ಲಿ ₹96.50, ಸೋನಿಪತ್‌ನಲ್ಲಿ ₹99.90 ಮತ್ತು ಫಿರೋಜಾಬಾದ್‌ನಲ್ಲಿ ₹99.90 ಕ್ಕೆ ಸಿಎನ್‌ಜಿ ಲಭ್ಯವಿದೆ.


