ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೈಗೊಂಡಿರುವ ಮಹತ್ವದ ಕ್ರಮಗಳ ಪರಿಣಾಮವಾಗಿ, ಸೋಮವಾರದ ವಹಿವಾಟಿನ ಆರಂಭದಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ.
ಹಿಂದಿನ ವಹಿವಾಟಿನಲ್ಲಿ 96.71 ರೂಪಾಯಿಯಷ್ಟಿದ್ದ ಡಾಲರ್ ಮೌಲ್ಯವು, ಸೋಮವಾರ ಆರಂಭಿಕ ವಹಿವಾಟಿನಲ್ಲಿ 95.77 ರೂಪಾಯಿಗೆ ಇಳಿದಿದೆ.ಅಂದರೆ, ಡಾಲರ್ ಎದುರು ರೂಪಾಯಿ ಮೌಲ್ಯ 94 ಪೈಸೆಯಷ್ಟು ಬಲಗೊಂಡಿದೆ.
ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಭರ್ಜರಿ ಚೇತರಿಕೆ ಕಂಡುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಾಲರ್ ಬೇಡಿಕೆಯನ್ನು ನಿಯಂತ್ರಿಸಲು ಹಾಗೂ ರೂಪಾಯಿ ಮೇಲಿನ ಒತ್ತಡ ಕಡಿಮೆ ಮಾಡಲು ಕೈಗೊಂಡಿರುವ ಹೊಸ ಕ್ರಮಗಳ ಬೆನ್ನಲ್ಲೇ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 94 ಪೈಸೆ ಏರಿಕೆಯಾಗಿ ಡಾಲರ್ ಎದುರು ₹95.77ಕ್ಕೆ ತಲುಪಿದೆ.
ಹಿಂದಿನ ವಹಿವಾಟಿನಲ್ಲಿ ಡಾಲರ್ ಮೌಲ್ಯ ₹96.71 ಆಗಿತ್ತು. ಆರ್‌ಬಿಐನ ಈ ಕ್ರಮಗಳು ರೂಪಾಯಿಗೆ ಎಷ್ಟರ ಮಟ್ಟಿಗೆ ದೀರ್ಘಕಾಲದ ಬೆಂಬಲ ನೀಡಲಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ರೂಪಾಯಿ ಮೌಲ್ಯ ಏರಿಕೆಗೆ ಕಾರಣವೇನು?
ರೂಪಾಯಿ ಮೌಲ್ಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಊಹಾತ್ಮಕ ವಹಿವಾಟುಗಳನ್ನು ನಿಯಂತ್ರಿಸಲು ಆರ್‌ಬಿಐ ಹಲವು ಕ್ರಮಗಳನ್ನು ಪ್ರಕಟಿಸಿದೆ. ಈ ಕ್ರಮಗಳು ರೂಪಾಯಿಗೆ ತಾತ್ಕಾಲಿಕ ಬೆಂಬಲ ನೀಡುವ ನಿರೀಕ್ಷೆಯಿದೆ.


