ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಚಿನ್ನದ ದರದಲ್ಲಿ ಇಂದು ದಿಢೀರ್ ಇಳಿಕೆ ಕಂಡುಬಂದಿದೆ.
ಇಂದಿನ ವ್ಯಾಪಾರದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಗಣನೀಯ ಕುಸಿತ ದಾಖಲಾಗಿದೆ. 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 152 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 15,268 ರೂಪಾಯಿಗೆ ತಲುಪಿದೆ.
ಅದೇ ರೀತಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,520 ರೂಪಾಯಿ ಕುಸಿತ ಕಂಡುಬಂದಿದ್ದು, ಇಂದಿನ ಮಾರುಕಟ್ಟೆ ಬೆಲೆ 1,52,680 ರೂಪಾಯಿಯಾಗಿದೆ.
ಇನ್ನು ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಸಹ ಉತ್ತಮ ಇಳಿಕೆ ಕಂಡುಬಂದಿದೆ.
22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 140 ರೂಪಾಯಿ ಕಡಿಮೆಯಾಗಿದ್ದು, ಹೊಸ ಬೆಲೆ 13,995 ರೂಪಾಯಿಗೆ ಬಂದು ತಲುಪಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ದರದಲ್ಲಿ 1,400 ರೂಪಾಯಿ ಇಳಿಕೆಯಾಗಿ, ಪ್ರಸ್ತುತ ಬೆಲೆ 1,39,950 ರೂಪಾಯಿಯಾಗಿ ದಾಖಲಾಗಿದೆ.


