ಚನ್ನಮ್ಮನ ಕಿತ್ತೂರು: ಬೆಂಗಳೂರ ವಿಧಾನ ಸೌಧ ಮುಂಬಭಾಗದಲ್ಲಿ ಕಿತ್ತೂರ ರಾಣಿ ಚನ್ನಮ್ಮನ ವೀರ ಜ್ಯೋತಿ ಯಾತ್ರೆಗೆ ಪೂಜೆ ಸಲ್ಲಿಸಿ ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವ-2026ರ ಅಂಗವಾಗಿ ವೀರ ಜ್ಯೋತಿ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ್ ಜಾರಕಿಹೊಳಿ ಅವರು ಮಾತನಾಡಿ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ತ್ಯಾಗ, ಸಾಹಸ, ಮತ್ತು ದೇಶಪ್ರೇಮದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ವಿಜಯ ಜ್ಯೋತಿ ಯಾತ್ರೆಗೆ ವಿಧಾನ ಸೌಧ ಪೂರ್ವ ದ್ವಾರದ ಮುಂಭಾಗದಲ್ಲಿ ಚಾಲನೆ ನೀಡಿದರು.
ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನದ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚಣಕಿ ಮಡಿವಾಳೇಶ್ವರ ಮಠ ಪಂಚಾಕ್ಷರಿ ಮಹಾಸ್ವಾಮಿಗಳು,
ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ಬಿಜ್ಜರಗಿಯ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಈ ಸಂದರ್ಭದಲ್ಲಿ ಕಿತ್ತೂರ ತಾಲೂಕಿನ ಪತ್ರಕರ್ತರು, ಅಸ್ಪಾಕ ಹವಾಲ್ದಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜೈ ಸಿದ್ದರಾಮ, ಗಣ್ಯರು ಉಪಸ್ಥಿತರಿದ್ದರು.


