ಬೋಪಾಲ್: ಸದಾಕಾಲ ರಾಜಕೀಯವಾಗಿ ಭಾರಿ ಸುದ್ದಿಯಲ್ಲಿರುವ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ಧನ ಮಿಶ್ರಾ ಈ ಬಾರಿ ಬರಿಗೈಯಲ್ಲೇ ಟಾಯ್ಲೆಟ್ ಸ್ವಚ್ಛ ಮಾಡಿ ಸುದ್ದಿಯಾಗಿದ್ದಾರೆ.
ತಮ್ಮ ಕೈಯಿಂದಲೇ ಶೌಚಾಲಯದ ಸೀಟ್ ಸ್ವಚ್ಛಗೊಳಿಸುತ್ತಿರುವ ಸಂಸದ ಜನಾರ್ಧನ ಮಿಶ್ರಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ ಜನಾರ್ದನ ಮಿಶ್ರಾ ಅವರು ಯಾವುದೇ ಸ್ವಚ್ಛತಾ ಕಾರ್ಮಿಕರ ಸಹಾಯ ಪಡೆಯದೆ, ಬರಿಗೈಯಲ್ಲೇ ಶೌಚಾಲಯದ ಸೀಟ್ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ.
ರೀಲ್ಸ್ ಗಾಗಿ ಸಂಸದರು ಈ ಕೆಲಸವನ್ನು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಆದರೆ, ವಿಡಿಯೋ ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅದರ ಹಿಂದಿನ ನಿಖರ ಉದ್ದೇಶವೇನು ಎಂಬುದು ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಹೀಗಾಗಿ, ರೀಲ್‌ಗಾಗಿ ಈ ಕೆಲಸ ಮಾಡಿದ್ದಾರೆ ಎಂಬುದನ್ನು ಖಚಿತ ಮಾಹಿತಿ ಎಂದು ಪರಿಗಣಿಸಲು ಸಾಧ್ಯವಿಲ್ಲ.


