LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮತ್ತೆ ಏರಿಕೆ ಕಂಡ ಅಕ್ಕಿ ಬೆಲೆ : ಗ್ರಾಹಕರು ಕಂಗಾಲು 

Advertisement

ಬೆಂಗಳೂರು: ಕಳೆದ ಎರಡು-ಮೂರು ತಿಂಗಳಲ್ಲಿ ರಾಜ್ಯದಲ್ಲಿ ಅಕ್ಕಿ ಬೆಲೆ ಶೇಕಡ 25 ರಿಂದ 30 ರಷ್ಟು ಹೆಚ್ಚಳವಾಗಿದ್ದು, ಪ್ರತಿ ಕೆಜಿ ಅಕ್ಕಿಯ ಬೆಲೆ ನೂರು ರೂಪಾಯಿ ಗಡಿ ದಾಟಿದೆ. 

ಮುಂಗಾರು ಮಳೆ ಕೊರತೆಯಿಂದಾಗಿ ಭತ್ತದ ನಾಟಿ ಮತ್ತು ಇಳುವರಿ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರಿನಂತಹ ಭತ್ತ ಬೆಳೆಯುವ ಪ್ರದೇಶಗಳಲ್ಲಿ ನಾಟಿ ಇಳಿಕೆಯಾಗಿದೆ.

ಸೋನಾ ಮಸೂರಿ, ಸ್ಟೀಮ್ ರೈಸ್, ಕೊಲಂ ರೈಸ್, ಬಾಸ್ಮತಿ, ಜೀರಾ ರೈಸ್ ಮತ್ತು ರಾಜ್ಮುಡಿ ಸೇರಿದಂತೆ ವಿವಿಧ ಅಕ್ಕಿ ಪ್ರಭೇದಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಅಕ್ಕಿ ಕೊರತೆಯ ಭೀತಿಯಲ್ಲಿರುವ ಹೋಟೆಲ್ ಉದ್ಯಮವು ಸಹ ತೊಂದರೆ ಅನುಭವಿಸುತ್ತಿದೆ. ಈಮಧ್ಯೆ, ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡುವವರಿಗೆ ಸರ್ಕಾರದಿಂದ ಎಚ್ಚರಿಕೆ ನೀಡಲಾಗಿದ್ದು, ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಅಕ್ರಮ ಸಂಗ್ರಹಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

 ಈಗಾಗಲೇ ಸುಮಾರು 18 ಲಕ್ಷ ಕೆಜಿ ಅಕ್ಕಿಯನ್ನು ಸೀಜ್ ಮಾಡಲಾಗಿದ್ದು, 232ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST