ಗ್ಲಾಸ್ಗೋವ್: ಇಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾರತ ೬ ಮಂದಿ ಬಾಕ್ಸರುಗಳು ಸೆಮಿಫೈನಲ್ ತಲುಪಿದ್ದು, ೧೦ ಪದಕಗಳ ಭರವಸೆ ಮೂಡಿಸಿದ್ದಾರೆ.
ಪುರುಷ ಹಾಗೂ ಮಹಿಳೆಯರ ವಿಭಾಗದ ವಿವಿಧ ಕೆಟೆಗೆರೆಗಳಲ್ಲಿ ಭಾರತದ ಆರು ಮಂದಿ ಸೆಮಿಫೈನಲ್ ತಲುಪಿದ್ದು, ಕನಿಷ್ಟ ೧೦ ಪದಕಗಳ ಭಾರತಕ್ಕೆ ತರುವ ಭರವಸೆ ಮೂಡಿಸಿದ್ದಾರೆ.
೭೫ ಕೆ.ಜಿ. ವಿಭಾಗದಲ್ಲಿ ಲೋವಿಂಗಾ ಬೋರಗೆಂವ್ ಸೆಮಿಫೈನಲ್ ತಲುಪಿದ್ದಾರೆ. ಪ್ರೀಯಾ ಗಂಘಾಸ್ ೬೦ ಕೆ.ಜಿ ವಿಭಾಗದಲ್ಲಿ, ಪ್ರೀತಿ ಪವಾರ ೫೪ ಕೆ.ಜಿ. ವಿಭಾಗದಲ್ಲಿ, ಜಡುಮಾನಿ ಸಿಂಗ್ ೫೫ ಕೆ.ಜಿ. ವಿಭಾಗದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಸೆಮಿಫೈನಲ್ ತಲುಪಿದ್ದಾರೆ.


