Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ರಾಜ್ಯ ನಿವೃತ್ತ ನೌಕರರ ತಾಲೂಕು ಸಂಘದ ವಾರ್ಷಿಕೋತ್ಸವ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ

Advertisement
ವಿಜಯಪುರ :ಜಿಲ್ಲೆಯಬಸವನ ಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ತಾಲೂಕು ಸಂಘ ಆಯೋಜಿಸುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಹಾಗೂ 75 ವರ್ಷ ತುಂಬಿದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಸಿದ್ದಲಿಂಗ ಸ್ವಾಮಿಗಳು ಹಾಗೂ ಸಚಿವ ಶಿವಾನಂದ್ ಪಾಟೀಲ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು .


ನಂತರ ಸಚಿವರಾದ ಕಾರ್ಯಕ್ರಮ ಕುರಿತು ಮಾತನಾಡಿದರು ಚಿಕ್ಕ ವಯಸ್ಸಿಗೆ ಯುವಕರು ಮೃತರಾಗುತ್ತಿದ್ದಾರೆ. ಈಗ ನೀವೇ ಪುಣ್ಯವಂತರು. 75, 80, 90 ದಾಟಿದವರೂ ಇಲ್ಲಿದ್ದೀರಿ. ಕೊರೊನಾ ಭಯದಲ್ಲೂ ಹಿರಿಯರು ಜಪ್ಪೆನ್ನದೆ ಬದುಕಿ ತೋರಿಸಿದ್ದು, ಯುವಕರು ನಾಚುವಂತೆ ಮಾಡಿದೆ. ಜಾತಿಯತೆ, ನಿರುದ್ಯೋಗ, ದುಶ್ಚಟ ಅತಿಯಾಗಿದೆ. ದುಶ್ಚಟಗಳಿಂದ ಯುವಕರ ಆರೋಗ್ಯ ಪೂರ್ಣ ಹದಗೆಟ್ಟು ಮೃತರಾಗುತ್ತಿದ್ದಾರೆ ಅಂತ ಮಾತನಾಡಿದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ವೈ.ಬಿ.ಪಟ್ಟಣಶೆಟ್ಟಿ ವಯಸ್ಸು 60-70 ದಾಟಿದ ಮೇಲೆ ಆರೋಗ್ಯದ ಕಡೆಗೆಹೆಚ್ಚು ಸಮಯ ವ್ಯಾಯಾಮ ಮಾಡಿ, ಸಂತ್ಸಂಗ, ಪ್ರವಚನ, ದೇವಸ್ಥಾನ ದರ್ಶನ, ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಆನಂದವಾಗಿರುತ್ತದೆ.

ಜನರಿಗೆ ಸಕ್ಕರೆ ಕಾಯಿಲೆ ಇದೆ. ಇದಕ್ಕೆ ಆಹಾರ ಕಲಬೆರಕೆಯೂ ಕಾರಣ. ಇಂತಹ ಕಲಬೆರಕೆಗೆ ಕಡಿವಾಣ ಹಾಕುಬೇಕು ಅನೇಕ ಕಾಯಿಲೆಯಿಂದಲೂ ಇಂದು ದೇಶದಲ್ಲಿ ಸಾಕಷ್ಟು ಜನರು ಸಾಯುತ್ತಿದ್ದಾರೆ. ಹಿತವಾದ ಊಟ ಮಾಡಿ ಆರೋಗ್ಯ ಕಾಪಾಡಿಕೊಳ್ಳು ಬೇಕು ಎಂದರು.



ನ್ಯಾಯವಾದಿ ಬಿ.ಕೆ.ಕಲ್ಲೂರ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎಸ್.ಕೆ. ಸೋಮನಕಟ್ಟಿ, ಅಧ್ಯಕ್ಷತೆ ವಹಿಸಿದ್ದ ಶ್ರೀ ಎಫ್.ಡಿ.ಮೇಟಿ, ಅಧ್ಯಕ್ಷರು ಕೆ. ರಾ .ನೀ.ನೌ.ಸಂಘ ಬಸವನಬಾಗೇವಾಡಿ. ಮಹಾಂತೇಶ ಆದಿಗೊಂಡ, ಸುರೇಶಗೌಡ ಪಾಟೀಲ ಇತರರು ಮಾತನಾಡಿದರು. ಸಿದ್ದಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶ್ರೀ ಎಸ್.ಪಿ.ಬಿರಾದಾರ. (ಕಡ್ಲೆವಾಡ), ಶ್ರೀ ಸುರೇಶ ಹಾರಿವಾಳ, ರೇಣುಕಾ,H. ಶ್ರೀ ಲ.ರು. ಗೊಳಸಂಗಿ ಸೇರಿ ವೇದಿಕೆ ಮೇಲಿದ್ದರು. ಇತರರಿದ್ದರು. 75 ವರ್ಷ ತುಂಬಿದ ೨೦ಜನ ನಿವೃತ್ತರಿಗೆ ಸನ್ಮಾನಿಸಲಾಯಿತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ