ಹಲ್ಯಾಳ :ಪ್ರತಿ ನಿತ್ಯ ಮನೆ ಮನೆಗೆ ತೆರಳಿ ಪೇಪರ್ ಹಾಕುವ ಬಾಲಕ ಆಕಾಶ ಬಿರಾದರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 572 ಅಂಕ ಪಡೆದಿದ್ದಾನೆ. ತಾಯಿ ಅನಾರೋಗ್ಯದಲ್ಲಿದ್ದಾಗ ತಾಯಿಗೆ ಮನೆ ಕೆಲಸದಲ್ಲಿ ಮತ್ತು ಅಡುಗೆ ಮಾಡಲು ಪ್ರತಿನಿತ್ಯ ಸಹಾಯ ಮಾಡುತಿದ್ದ, ತಂದೆ ಲಾರಿ ಡ್ರೈವರ್ ಇದ್ರೂ ಮಕ್ಕಳ ಓದುವಿಗೆ ಏನು ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾನೆ.ಬಡತನ ಮತ್ತು ಕಷ್ಟ ಸಮಯವನ್ನು ತನ್ನ ಸಾಧನೆಯ ಮೆಟ್ಟಿಲಾಗಿ ತಂದೆ ತಾಯಿಗಳ ನಂಬಿಕೆಗೆ ಅತ್ತ್ಯುತ್ತಮ ಸಾಧನೆ ಮಾಡಿದ್ದಾನೆ.

