ಚಿಟಗುಪ್ಪ : ತಾಲ್ಲೂಕಿನ ಮಂಗಲಗಿ ಗ್ರಾಮದ ಹಮಿದುಲ್ಲಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು,ಪರೀಕ್ಷೆಗೆ ಹಾಜರಾಗಿದ್ದ ಅಷ್ಟು ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಹಮಿದುಲ್ಲಾ ಶಾಲೆ 100% ಫಲಿತಾಂಶ ತಂದುಕೊಟ್ಟಿದ್ದಾರೆ.
ಮಹಮ್ಮದ್ ಖುಶ್ರುದ್ದಿನ್ ಖಾದ್ರಿ 99.36 ಅಂಕ ಪಡೆದು ರಾಜ್ಯಕ್ಕೆ 5ನೇ,ಜಿಲ್ಲೆಗೆ 2ನೇ ಸ್ಥಾನ ಹಾಗೂ ಹುಮನಾಬಾದ ಮತ್ತು ಚಿಟಗುಪ್ಪ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದು ಸಾಧನೆ ಗೈದಿದ್ದಾನೆ.
ಶಾಲೆಯ ಇನ್ನೊರ್ವ ವಿದ್ಯಾರ್ಥಿ ಮಹಮ್ಮದ್ ಸಾದಿಕ್ ಅಲಿ 98% ಅಂಕ ಪಡೆದು ತಮ್ಮ ಶಾಲೆಗೆ 2ನೇ ಸ್ಥಾನ ಪಡೆದಿದ್ದಾನೆ.ವಿದ್ಯಾರ್ಥಿ ಸ್ನೇಹ 96% ಅಂಕ ಪಡೆದು ಶಾಲೆಗೆ 3ನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಅಜಿಮ್ ಉಲ್ಲಾ ಶಾ ಖಾದ್ರಿ ಹಾಗೂ ಸಂಸ್ಥೆಯ ಆಡಳಿತಾಧಿಕಾರಿಗಳು,ಕಾರ್ಯದರ್ಶಿಗಳಾದ ಶಿರಿನ್ ಖಾದ್ರಿ ಅವರು ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು.
ಬಳಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳು ಮಾತನಾಡಿದ್ದು ಹೀಗೆ.
ವರದಿ : ಸಜೀಶ್ ಲಂಬುನೋರ್

