ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ರಾಮಸಾಗರ ಗ್ರಾಮದಲ್ಲಿ ಇಂದು ಸಂಜೆ ಸಿಡಿದ ಭಾರೀ ಸಿಡಿಲಿಗೆ ಗ್ರಾಮದ 17 ಕುರಿ ಮತ್ತು ಮೇಕೆಗಳು ಬಲಿಯಾಗಿವೆ.
ರಾಮಸಾಗರ ಗ್ರಾಮದ ರೈತರಾದ ವರದರಾಜು, ಲಕ್ಕಣ್ಣ, ಗೋವಿಂದರಾಜು, ಜಯಲಕ್ಷ್ಮಮ್ಮ, ರವರಿಗೆ ಸೇರಿದ ಕುರಿ ಮತ್ತು ಮೇಕೆಗಳಾಗಿವೆ ಎಂದು ತಿಳಿದುಬಂದಿದೆ.
ಕಳೆದೊಂದ ವಾರದಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಎಲ್ಲೆಡೆ ಗುಡಗು ಸಿಡಿಲಿನ ಅಬ್ಬರ ಜೋರಾಗಿದೆ. ಇಂದು ಭೀಕಡ ಸಿಡಿಲಿಗೆ ಕುರಿ ಮೇಕೆಗಳು ಬಲಿಯಾಗಿದೆ.
ಘಟನಾ ಸ್ಥಳಕ್ಕೆ ತಾಲ್ಲೂಕು ಆಡಳಿತ, ಪಶು ಇಲಾಖೆ ಅಧಿಕಾರಿಗಳು ಆಗಮಿಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
[video width="478" height="850" mp4="https://bharathvaibhav.com/wp-content/uploads/2024/10/WhatsApp-Video-2024-10-23-at-6.15.34-PM.mp4"][/video]
ವರದಿ: ಗಿರೀಶ್ ಕೆ ಭಟ್

