ಮಾನ್ವಿ: ಪಟ್ಟಣದ ಹಳೆ ಎಲ್.ಐ.ಸಿ. ಕಾಂಪ್ಲೆಕ್ಸ್ನಲ್ಲಿ ಮಾನ್ವಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಹಮ್ಮಿಕೊಂಡ 187ನೇ ವಿಶ್ವ ಛಾಯಾಗ್ರಹಕರ ದಿನಾಚರಣೆ ಕಾರ್ಯಕ್ರಮವನ್ನು ಲೂಯಿಸ್ ಡಾಗುರೆ ರವರ ಭಾವಚಿತ್ರಕ್ಕೆ ಮಾನ್ವಿ ತಾಲೂಕು ಛಾಯಾಗ್ರಾಹಕ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀನಾಥ್ ಚೌಧರಿ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಲೂಯಿಸ್ ಡಾಗುರೆ ರವರ 1839ರ ಆ.19 ರಂದು ಛಾಯಚಿತ್ರಗಳನ್ನು ಮುದ್ರಿಸುವುದನ್ನು ಕಂಡು ಹಿಡಿದ ನೆನಪಿಗಾಗಿ ಪ್ರತಿ ವರ್ಷ ಆ.19 ರಂದು ವಿಶ್ವ ಛಾಯಾಗ್ರಹಕರ ದಿನಾಚರಣೆಯನ್ನು ಆಚರಿಸಲಾಗುವುದು. ಇಂದು ಜನರ ಜೀವನದಲ್ಲಿನ ಅಪರೂಪದ ಅಮೂಲ್ಯ ಕ್ಷಣಗಳನ್ನು ದಾಖಲಿಸುವ ವಿಶೇಷವಾದ ಛಾಯಗ್ರಹಣ ವೃತ್ತಿಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಐತಿಹಾಸಿಕ ಘಟನೆಗಳು, ಸಾಮಾಜಿಕ ಬದಲಾವಣೆಗಳು ಹಾಗೂ ಜನಜೀವನದ ಪ್ರಮುಖ ಕ್ಷಣಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುವಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮಾನ್ವಿ ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷರಾದ ಪ್ರಸಾದ್ ಮಿಶ್ರಾ, ಜಗನ್ನಾಥ್ ಚೌದ್ರಿ ಕಾರ್ಯದರ್ಶಿ ಪ್ರಭು ಕುಂಬಾರ್ ರವಿಕುಮಾರ್ ಗೌಡ ಸಿ.ನಾಗರಾಜ್ ಅಬ್ದುಲ್ ಗಯಾಸ್ ರಾಮ್ ಪ್ರಸಾದ್ ಮಿಶ್ರ ಸಿರಾಜ್ ಪಾಷಾ ಶಫೀ ಚಾವೂಸ್ ಮಂಜುನಾಥ್ ಶಿವಕುಮಾರ್ ಸಜ್ಜನ್ ಶರಣು ಕಳಸ ಕಾಳಿಂಗ ರಾಜ್ ವಿಜಯ್ ಕುಮಾರ್ ಮಾನ್ವಿ ಉಮಾಇನ್ ಮುಸ್ತಫ ಜೆ. ಶಂಕರ್ ಜಂಬಣ್ಣ ರವಿ ಕುಮಾರ್ ಮಲ್ಲೇಶ್ ಬಸವರಾಜ್ ಅಜಯ್ ಕುಮಾರ್ ಸೇರಿದಂತೆ ಮಾನ್ವಿ ತಾಲೂಕಿನ ನೂರಾರು ಛಾಯಾಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:ಆಂಜನೇಯ ನಸಲಾಪುರ


