Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

25 ನಿಮಿಷ, 24 ಕ್ಷಿಪಣಿ ದಾಳಿ, ಉಗ್ರ ಕೋಟೆಗಳು ಧ್ವಂಸ

Advertisement
ನಿಖರ ದಾಳಿ ಹಂಚಿಕೊಂಡ ಭಾರತೀಯ ಸೇನೆ

ನವದೆಹಲಿಪಹಲ್ಗಾಮ್‌ನಲ್ಲಿ​ ಪಾಕ್‌ ಪ್ರಾಯೋಜಿತ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಉಗ್ರರ 9 ತಾಣಗಳನ್ನು ಪುಡಿಗಟ್ಟಿದೆ. ಈ ದಾಳಿಯಲ್ಲಿ ಹಲವು ಉಗ್ರರು ಮೃತಪಟ್ಟಿದ್ದಾಗಿ ಸೇನೆ ತಿಳಿಸಿದೆ. ಇದರ ಜೊತೆಗೆ, ತಾನು ನಡೆಸಿದ ದಾಳಿಯ ಚಿತ್ರ ಮತ್ತು ವಿಡಿಯೋಗಳನ್ನು ಒದಗಿಸಿದೆ.

ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್​-ಎ-ತೊಯ್ಬಾ (ಎಲ್​​ಇಟಿ), ಜೈಶ್-ಎ- ಮೊಹಮದ್​​ (ಜೆಇಎಂ) ಉಗ್ರ ಸಂಘಟನೆಗಳಿಗೆ ಸೇರಿದ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು 'ಆಪರೇಷನ್​ ಸಿಂಧೂರ' ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಈ ಕಾರ್ಯಾಚರಣೆಯು ಬುಧವಾರ ಮಧ್ಯರಾತ್ರಿ 1.05ರಿಂದ 1.30ರೊಳಗೆ ಅಂದರೆ, ಕೇವಲ 25 ನಿಮಿಷದಲ್ಲಿ ನಡೆದಿದೆ. ಇಷ್ಟರಲ್ಲಿ 24 ಕ್ಷಿಪಣಿಗಳನ್ನು ಸಿಡಿಸಲಾಗಿದ್ದು, 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಭಾರತೀಯ ಸೇನೆ, ನೌಕಾದಳ, ವಾಯುಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ ಎಂದು ಸೇನೆ ಹೇಳಿದೆ.

ಭಾರತೀಯ ಸೇನಾಪಡೆಗಳು ದಾಳಿ ನಡೆಸಿದ ಸ್ಥಳಗಳಿವು:

ಮುಜಫರಾಬಾದ್, ಕೋಟ್ಲಿ, ಬಹವಾಲ್​​ಪುರ್​​, ರಾವಲಕೋಟ್, ಚಕ್​​ ಸ್ವರಿ,ಭಿಂಬರ್, ನೀಲಂ ಕಣಿವೆ, ಝೇಲಂ, ಚಕ್ವಾಲ್‌

ಈ ಮೇಲಿನ ಸ್ಥಳಗಳಲ್ಲಿದ್ದ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ನಾಶಗೊಳಿಸಲಾಗಿದೆ. ಇವುಗಳು ಭಯೋತ್ಪಾದಕರ ಶಿಬಿರಗಳಾಗಿದ್ದವು ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ