ಸಿಂಧನೂರು : ಜೈ ಜವಾನ್ ಜೈ ಕಿಸಾನ್ ಜನ ಸೇವಾ ಸಂಘ, ಕರ್ನಾಟಕ ಭಾರತೀಯ ಪ್ಯಾರಾ ಮಿಲಿಟರಿ ಮಾಜಿ ಯೋಧರ ಕ್ಷಮಾಭಿವೃದ್ಧಿ ಸಂಘ ಸಿಂಧನೂರು ತಾಲೂಕ ಸಮಿತಿ ವತಿಯಿಂದ 27 ನೇ ಕಾರ್ಗಿಲ್ ವಿಜಯೋತ್ಸವ ಸಂಭ್ರಮ ಆಚರಣೆ ಮಾಡಲಾಯಿತು.

ನಗರದ ಗಣೇಶ್ ಗುಡಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ 1962, 1965, 1971,1999,ರ ನಾಲ್ಕು ಮಹಾ ಯುದ್ಧಗಳಲ್ಲಿ ಮಾಡಿದಂತಹ ವೀರ ಯೋಧರು ಮೆರೆದ ಶೌರ್ಯ ಹಾಗೂ ತ್ಯಾಗ ಬಲಿದಾನವನ್ನು ಸ್ಮರಿಸಿ ದೇಶಭಕ್ತಿಯ ಘೋಷಣೆಯೊಂದಿಗೆ ಯೋಧರ ಸಾಹಸವನ್ನು ಕೊಂಡಾಡಿದ ಗಣ್ಯರು, ಅವರ ತ್ಯಾಗ ಮತ್ತು ಸೇವೆ ದೇಶದ ಇತಿಹಾಸದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯಲಿ ಎಂದರು ಈ ಸಂದರ್ಭದಲ್ಲಿ ಮಾಜಿ ಯೋಧರಾದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕ ಅಧ್ಯಕ್ಷ ವೀರಭದ್ರಯ್ಯ, ತಾಲೂಕ ಗೌರವಾಧ್ಯಕ್ಷ ಚನ್ನನಗೌಡ, ಉಪಾಧ್ಯಕ್ಷ ಗುರುರಾಜ ದೇಸಾಯಿ, ಪ್ರಧಾನ ಕಾರ್ಯದರ್ಶಿ ಸಣ್ಣಪ್ಪ, ರುದ್ರೇಶ್ ತುಂಬಾದ ಹಾಗೂ ತಾಲೂಕ ಪದಾಧಿಕಾರಿಗಳು ವೀರನಾರಿಯರು ಮತ್ತು ಸರ್ವ ಸದಸ್ಯರು ಕಾಲೇಜು ವಿದ್ಯಾರ್ಥಿಗಳು ಸಂಘಟನೆ ಪದಾಧಿಕಾರಿಗಳು ಭಾಗವಹಿಸಿ ಯುದ್ಧದಲ್ಲಿ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು. 
ವರದಿ : ಬಸವರಾಜ ಬುಕ್ಕನಹಟ್ಟಿ,


