Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2ನೇ ಹೆಂಡತಿಗೆ ಆಸ್ತಿಯಲ್ಲಿ ಹಕ್ಕಿಲ್ಲ : ಹೈಕೋರ್ಟ್ 

Advertisement

ಬೆಂಗಳೂರು : ಮುಸ್ಲಿಂ ವೈಯಕ್ತಿಕ ಕಾನೂನು ಬಹುಪತ್ನಿತ್ವಕ್ಕೆ ಅವಕಾಶ ನೀಡುತ್ತದೆ ಎಂಬ ನೆಪವನ್ನಿಟ್ಟುಕೊಂಡು, ಮೊದಲ ಮದುವೆ ಅಸ್ತಿತ್ವದಲ್ಲಿರುವಾಗಲೇ 'ವಿಶೇಷ ವಿವಾಹ ಕಾಯ್ದೆ'ಯ ಅಡಿಯಲ್ಲಿ ಮಾಡಿಕೊಳ್ಳುವ ಎರಡನೇ ಮದುವೆಗೆ ಕಾನೂನಿನ ಮಾನ್ಯತೆ ದೊರೆಯುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಕಾರಣದಿಂದಾಗಿ ಅಂತಹ ದ್ವಿತೀಯ ಪತ್ನಿಗೆ ಮೃತನ ಆಸ್ತಿಯಲ್ಲಿ ಯಾವುದೇ ಕಾನೂನಾತ್ಮಕ ಪಾಲು ಸಿಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ತೀರ್ಪು ನೀಡಿದೆ.

ಹೈಕೋರ್ಟ್ನ ಧಾರವಾಡ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ವ್ಯಕ್ತಿಗಳು ತಮ್ಮ ವೈಯಕ್ತಿಕ ಕಾನೂನುಗಳನ್ನು ಬದಿಗೊತ್ತಿ ಸ್ವಇಚ್ಛೆಯಿಂದ 'ವಿಶೇಷ ವಿವಾಹ ಕಾಯ್ದೆ'ಯನ್ನು ಆಯ್ಕೆ ಮಾಡಿಕೊಂಡಾಗ, ಅವರು ಸಂಪೂರ್ಣವಾಗಿ ಅದೇ ಕಾಯ್ದೆಯ ನಿಯಮ-ನಿಬಂಧನೆಗಳಿಗೆ ಬದ್ಧರಾಗಿರಬೇಕು. ಈ ಕಾಯ್ದೆಯಡಿ ಮದುವೆಯಾಗಲು 'ಜೀವಂತ ಪತಿ ಅಥವಾ ಪತ್ನಿ ಇರಬಾರದು' ಎಂಬುದು ಮುಖ್ಯ ಷರತ್ತಾಗಿದೆ. 

ಕಾಯ್ದೆಯ ಸೌಲಭ್ಯವನ್ನು ಪಡೆಯುತ್ತಾ, ಅದೇ ಸಮಯದಲ್ಲಿ ವೈಯಕ್ತಿಕ ಕಾನೂನಿನ ವಿನಾಯಿತಿ ಕೋರುವುದು ಕಾನೂನುಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST