ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪದ ಬೈರಮಂಗಲ ವೃಷಭಾವತಿ ಜಲಾಶಯದ (ಕೆರೆ) ಕೋಡಿ ಭಾಗದಲ್ಲಿ ಹತ್ತಾರು ಕಂತೆ 500 ರೂಪಾಯಿ ಮುಖಬೆಲೆಯ ನೋಟುಗಳು ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬಿಡದಿ ಕೈಗಾರಿಕಾ ಪ್ರದೇಶದ ಬಳಿ ಹರಿಯುವ ಕೆರೆಯ ನೀರಿನ ದಂಡೆ ಹಾಗೂ ಕಸದ ನಡುವೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಟ್ಟಲಾಗಿದ್ದ ಕನಿಷ್ಠ 25ಕ್ಕೂ ಹೆಚ್ಚು ನೋಟಿನ ಕಟ್ಟುಗಳನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ.
ಈ ಅಪರೂಪದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ನೀರಿನಲ್ಲಿ ತಲಾಂತಂತರವಾಗಿ ತಾರಿಬಂದಂತೆ ಬಿದ್ದಿದ್ದ ಈ ಹಣವನ್ನು ಕಂಡು ಆರಂಭದಲ್ಲಿ ಇವು ಅಸಲಿ ನೋಟುಗಳೇ ಇರಬಹುದೆಂದು ಸಾರ್ವಜನಿಕರು ಶಂಕಿಸಿದ್ದರು.
ಇಷ್ಟೊಂದು ಭಾರಿ ಪ್ರಮಾಣದ ಹಣವನ್ನು ಯಾರೋ ಬೇಕೆಂದೇ ಪೊಲೀಸರ ಅಥವಾ ಕಾನೂನಿನ ಕಣ್ಣಿಗೆ ತಪ್ಪಿಸಲು ರಾತ್ರೋರಾತ್ರಿ ತಂದು ಎಸೆದಿರಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಸ್ಥಳಕ್ಕೆ ಓಡಿಬಂದ ಕೆಲವರು, ನೀರಿನಲ್ಲಿದ್ದ ಹಣದ ಕಟ್ಟುಗಳನ್ನು ಹೊರತೆಗೆದು ಒಣಗಿಸಿ ಪರಿಶೀಲಿಸಿದ್ದಾರೆ.


