Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟ್ವೆಂಟಿ-20 ಯಲ್ಲಿ ಕಡೆಯ ಓವರ್ ಮೆಡಿನ್ ಮಾಡಿದವರು

Advertisement
ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನಲ್ಲಿ ಬೌಲರ್​​ಗಳಿಗಿಂತ ಬ್ಯಾಟರ್​​ಗಳ ಅಬ್ಬರವೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್​ ಸ್ನೇಹಿ ಪಿಚ್​​ಗಳನ್ನು ನಿರ್ಮಿಸಿ ಪಂದ್ಯಗಳನ್ನು ನಡೆಸಲಾಗುತ್ತಿದೆ ಎಂಬ ಕೂಗುಗಳು ಕೇಳಿ ಬರುತ್ತಿವೆ. ಇದರಿಂದ ವಿಶ್ವದ ಶ್ರೇಷ್ಠ ಬೌಲರ್​ಗಳು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅದರಲ್ಲೂ ಐಪಿಎಲ್​ನಲ್ಲಿ ಮೇಡನ್​ ಓವರ್​ ಮಾಡುವುದು ಕೂಡ ಅಪರೂಪವಾಗಿದೆ. ಆದರೆ, ನಿಮಗೆ ಗೊತ್ತಾ ಈ ಹಿಂದೆ ಕೆಲ ಬೌಲರ್​ಗಳು ಕೊನೆಯ ಓವರ್​​ನಲ್ಲಿ ಮೇಡನ್​ ಮಾಡಿದ್ದಾರೆ.

ಸಾಮಾನ್ಯವಾಗಿ ಕೊನೆಯ ಓವರ್​ನಲ್ಲಿ ಬೌಲರ್​ಗಳ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವುದನ್ನು ತಡೆಯುವುದು ಅತ್ಯಂತ ಕಷ್ಟಕರವಾದ ಕೆಲಸ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಬೌಲರ್‌ಗೆ 20ನೇ ಓವರ್ ಬೌಲಿಂಗ್​ ಮಾಡುವುದು ಸುಲಭದ ಮಾತಲ್ಲ. ಆದರೆ, ನಾಲ್ವರು ಬೌಲರ್​​​ಗಳು 20ನೇ ಓವರ್​ನಲ್ಲೂ ಮೇಡನ್ ಮಾಡಿದ್ದಾರೆ. ಐಪಿಎಲ್​ ಇತಿಹಾಸದಲ್ಲೇ ಈ ಸಾಧನೆ ಮಾಡಿದ ನಾಲ್ವರು ಬೌಲರ್​ ಯಾರು ಎಂದು ಇದೀಗ ತಿಳಿದುಕೊಳ್ಳೋಣ.

1) ಇರ್ಫಾನ್ ಪಠಾಣ್: ಐಪಿಎಲ್ ಇತಿಹಾಸದಲ್ಲಿ, 20ನೇ ಓವರ್​ ಮೇಡನ್​ ಮಾಡಿದ ಮೊದಲ ಬೌಲರ್​ ಆಗಿದ್ದಾರೆ. 2008 ರಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಠಾಣ್ ಈ ಸಾಧನೆ ಮಾಡಿದ್ದರು. ಆ ಸಮಯದಲ್ಲಿ ಪಠಾಣ್ ಪಂಜಾಬ್ ತಂಡದ ಭಾಗವಾಗಿದ್ದರು. ಪಠಾಣ್ ಐಪಿಎಲ್‌ನಲ್ಲಿ 103 ಪಂದ್ಯಗಳನ್ನು ಆಡಿದ್ದು, 80 ವಿಕೆಟ್‌ಗಳನ್ನು ಕಬಳಿಸಿದ್ದಾರೆ.



2) ಲಸಿತ್ ಮಾಲಿಂಗಶ್ರೀಲಂಕಾದ ಸ್ಟಾರ್​​ ವೇಗದ ಬೌಲರ್​ ಲಸಿತ್​ ಮಾಲಿಂಗ ಅವರನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಮುಂಬೈ ತಂಡದ ಪರ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಮಾಲಿಂಗ 122 ಐಪಿಎಲ್ ಪಂದ್ಯಗಳನ್ನು ಆಡಿ 170 ವಿಕೆಟ್‌ಗಳನ್ನು ಪಡೆದಿದ್ದಾರೆ. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಮಾಲಿಂಗ 20ನೇ ಓವರ್​ ಮೇಡನ್ ಬೌಲಿಂಗ್ ಮಾಡಿ ಎರಡು ವಿಕೆಟ್​ಗಳನ್ನು ಕಬಳಿಸಿದ್ದರು.



3) ಜಯದೇವ್ ಉನದ್ಕತ್ಜಯದೇವ್​ ಉನದ್ಕತ್ 2017ರಲ್ಲಿ​ ಪುಣೆ ತಂಡವನ್ನು ಪ್ರತಿನಿಧಿಸುವಾಗ ಹೈದರಾಬಾದ್ ವಿರುದ್ಧ 20ನೇ ಓವರ್ ಮೇಡನ್​ ಬೌಲಿಂಗ್ ಮಾಡಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಮೇಡನ್​ ಜೊತೆಗೆ ಹ್ಯಾಟ್ರಿಕ್ ವಿಕೆಟ್​ ಪಡೆದ ಬೌಲರ್​ ಎಂಬ ದಾಖಲೆ ನಿರ್ಮಿಸಿದ್ದಾರೆ.



4) ಉಮ್ರಾನ್ಮಲಿಕ್​: 2022ರಲ್ಲಿ ಹೈದರಾಬಾದ್ ತಂಡ ಪ್ರತಿನಿಧಿಸಿದ್ದ ಉಮ್ರಾನ್ ಇನ್ನಿಂಗ್​​​​​ನ ಕೊನೆಯ ಓವರ್​ನಲ್ಲಿ​ ಪಂಜಾಬ್ ಕಿಂಗ್ಸ್ ತಂಡದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ಅಲ್ಲದೇ ಒಂದೇ ಒಂದು ರನ್ ನೀಡಿರಲಿಲ್ಲ. ಈ ಸಾಧನೆಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯು ಸಿಕ್ಕಿತ್ತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ