Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾವಿನಲ್ಲೂ ಒಂದಾದ ದಂಪತಿ : 45 ವರ್ಷಗಳ ದಾಂಪತ್ಯ ಇನ್ನಿಲ್ಲ 

Advertisement

ಹಾವೇರಿ: ಬದುಕಿದರೂ ಜೊತೆಯಾಗಿ, ಬಾಳದಿದ್ದರೂ ಜೊತೆಯಾಗಿ ಎನ್ನುವ ಹಿರಿಯರ ಮಾತು ಹಾವೇರಿ ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ.

ದಾಂಪತ್ಯ ಜೀವನದ ಪವಿತ್ರತೆಗೆ ಸಾಕ್ಷಿಯೆಂಬಂತೆ, 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿ ಬದುಕಿದ ಆದರ್ಶ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗುವ ಮೂಲಕ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದ್ದಾರೆ.

ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಆಕೆಯ ಅಗಲಿಕೆಯ ತೀವ್ರ ದುಃಖವನ್ನು ತಾಳಲಾರದೆ ಪತಿಯೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ಜರುಗಿದೆ.

ವಿಧಿಯ ಆಟ ವಿಚಿತ್ರವಾಗಿತ್ತು. ಭಾನುವಾರ ತಡರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಪತ್ನಿ ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು. 

ಅರ್ಧಾಂಗಿಯ ಹಠಾತ್ ನಿಧನ ವಯೋವೃದ್ಧ ಜುಂಜಪ್ಪ ಅವರಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ಆಘಾತವನ್ನು ನೀಡಿತು. 45 ವರ್ಷಗಳ ಕಾಲ ನೆರಳಿನಂತೆ ಜೊತೆಗಿದ್ದ ಹೆಂಡತಿಯ ಶವದ ಮುಂದೆ ಕುಳಿತು, "ನೀನಿಲ್ಲದೆ ನಾ ಹೇಗೆ ಬದುಕಲಿ?" ಎಂದು ಆ ವೃದ್ಧ ರಾತ್ರಿ ಇಡೀ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾವಿನಲ್ಲೂ ಒಂದಾದ ದಂಪತಿ : 45 ವರ್ಷಗಳ ದಾಂಪತ್ಯ ಇನ್ನಿಲ್ಲ ದಾಸರಹಳ್ಳಿಯಲ್ಲಿ ವಿಜೃಂಭಣೆಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ : ಡಿ. ಕೆ ಶಿವಕುಮಾರ್27ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಬಾಗಲಕೋಟೆಯಲ್ಲಿ ಭಾವಪೂರ್ಣ ಬೈಕ್ ರ‍್ಯಾಲಿ; ವೃದ್ಧಾಶ್ರಮದಲ್ಲಿ ಸಿಹಿ ಹಂಚಿ ಅರ್ಥಪೂರ್ಣ ಆಚರಣೆಪ್ರಾಚೀನ ವಿಠ್ಠಲ ದೇವಸ್ಥಾನದಲ್ಲಿ ಅಭೂತಪೂರ್ವ ಉತ್ಸಾಹದಿಂದ ಆಷಾಢ ಏಕಾದಶಿಯನ್ನು ಆಚರಿಸಲಾಯಿತು!   ಕಾರ್ಗಿಲ್ ವಿಜಯೋತ್ಸವದಲ್ಲಿ ಯೋಧರ ತ್ಯಾಗ ಅನನ್ಯಐತಿಹಾಸಿಕ ಕಾರುಣ್ಣಿಮೆ ಆಚರಣೆ ಯುಟಿ ಖಾದರ್ ಗೆ ಅಮೆರಿಕದ ಪ್ರತಿಷ್ಠಿತ ಗ್ಲೋಬಲ್ ಸಿವಿಕ್ಸ್ ಲೀಡರ್‌ಶಿಪ್' ಪುರಸ್ಕಾರ ರಾಜ್ಯದ ಪದವಿ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಚ್ಐವಿ ಟೆಸ್ಟ್ ಕಡ್ಡಾಯ ಆಗಸ್ಟ್ 6 ಬದಲು ಆಗಸ್ಟ್ 13 ರಿಂದ ಮುಂಗಾರು ಅಧಿವೇಶನ : ಡಿ.ಕೆ.ಶಿವಕುಮಾರ್