Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಪಿಗಳನ್ನು ಬಂಧಿಸುವಂತೆ ಗೋಕಾಕದಲ್ಲಿ ಭಾರಿ ಪ್ರತಿಭಟನೆ

Advertisement
ಗೋಕಾಕ : ಮೂಡಲಗಿ ತಾಲೂಕಿನ ಯಾದವಾಡದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಡಾ: ಅಂಬೇಡ್ಕರ ಭಾವ ಚಿತ್ರಕ್ಕೆ ಸೆಗಣಿ ಹಚ್ಚಿದ್ದನ್ನು ಖಂಡಿಸಿ ಗೋಕಾಕ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ನೂರಾರು ದಲಿತರು ಪ್ರತಿಭಟನೆ ಮಾಡಿದರು.

ನಂತರ ದಿಕ್ಕಾರ ಕೂಗುತ್ತಾ ಪಾದಯಾತ್ರೆ ಮಾಡುತ್ತಾ ಪೋಲಿಸರ ನಡೆಯ ವಿರುದ್ದ ದಿಕ್ಕಾರ ಕೂಗುತ್ತಾ ತಹಸಿಲ್ದಾರ ಕಚೇರಿ ಮುಂದೆ ದರಣಿ ಮಾಡಿದರು.

ಪ್ರತಿಭಟನೆಯಲ್ಲಿ ಬಾಗಿಯಾದ ದಲಿತ ಮಹಿಳಾ ಅದ್ಯಕ್ಷ ಕಮಲಾ ಕರೆಮ್ಮನವರ ಇವರು ಮಾತನಾಡಿ ಹಲ್ಲೆ ಮಾಡಿದವನಿಗೆ ಉಪಾದಕ್ಷ ಹುದ್ದೆ ಬಂದಿದ್ದು ಡಾ: ಬಾಬಾಸಾಹೇಬ ಅಂಬೇಡ್ಕರ ಇವರು ನೀಡಿದ ಸಂವಿಧಾನದಿಂದ ಹೀಗಿರುವಾಗ ದುಡಿಯಲು ಬಂದಂತಹ ದಲಿತ ಯುವಕನ ಎಳಿಗೆ ಸಹಿಸಲಾಗದ ಕಲ್ಮೇಶ ಗಾಣಿಗೇರ ಇತ ಹಲ್ಲೆ ಮಾಡಿದ್ದು ಕೇವಲ ಸಿಗರೇಟು ನೇಪ ಮಾತ್ರ ಇದೆ, ಅದಕ್ಕಾಗಿ ಪೊಲೀಸ್ ಇಲಾಖೆಯವರು ಬಹಳಷ್ಟು ದೊಡ್ಡ ಅಪರಾದಿಗಳನ್ನು ಬಂದಿಸಿದ್ದಿರಿ, ಆದರೆ ಕಲ್ಮೇಶ ಗಾಣಿಗೇರನನ್ನು ಬಂದಿಸುವಲ್ಲಿ ವಿಫಲ ಆಗುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಈಶ್ವರ ಗುಡಜ ಇವರು ಆರೋಪಿಗಳು ಇರುವ ಸ್ಥಳ ಗೊತ್ತಿದ್ದರೂ ಸಹ ಪೋಲಿಸರು ಅವರನ್ನು ಬಂದಿಸುವಲ್ಲಿ ಹಿಂದೇಟು ಹಾಕುತ್ತಿದ್ದಿರಿ. ತಮಗೆ ಇಷ್ಟೊಂದು ಚಳ್ಳೆ ಹಣ್ಣು ತಿನ್ನಿಸುತಿದ್ದಾನೆಂದರೆ ಅವನು ಎಷ್ಟು ಕ್ರಿಮಿನಲ್ ಇದ್ದಿರಬಹುದು ಎಂದು ಪ್ರಶ್ನಿಸಿ ಪೋಲಿಸರ ವಿರುದ್ದ ಹರಿಹಾಯ್ದರು.

ಅದಕ್ಕಾಗಿ ಪೋಲಿಸ ಇಲಾಖೆಯವರು ತಕ್ಷಣ ಹಲ್ಲೆ ಮಾಡಿದ ಆರೋಪಿಯನ್ನು ಬಂದಿಸಬೇಕೆಂದು ಒತ್ತಾಯಿಸಿ. ಇಲ್ಲದಿದ್ದರೆ ರಾಜ್ಯಾದಂತ ಪೋಲಿಸ ಠಾಣೆಗಳ ಎದುರು ಪ್ರತಿಬಟನೆ ಮಾಡುತ್ತೇವೆಂದು ತಹಸಿಲ್ದಾರ ಮುಖಾಂತರ ಗೃಹ ಸಚಿವರಿಗೆ ಮನವಿ ನೀಡಿದರು

ಈ ಸಂದರ್ಭದಲ್ಲಿ ಗೋಕಾಕ ದಲಿತ ಮುಖಂಡರಾದ ಗೋವಿಂದ ಕಳ್ಳಿಮನಿ,ರಮೇಶ ಹರಿಜನ, ಬಸವರಾಜ ಮೇಸ್ತ್ರಿ ರಫೀಕ ಬೊಕರೆ,ಶೆಟ್ಟೆಪ್ಪ ಮೇಸ್ತ್ರಿ ವಾಲ್ಮಿಕಿ ಸಂಘದ ರಾಜ್ಯಾದಕ್ಷ ಸುರೇಶ ಕುಮರೇಶಿ,ರಮೇಶ ಮೇಸ್ತ್ರಿ, ಅರ್ಜುನ ಗಂಡವ್ವಗೋಳ, ವಿಶಾಲ ಮೇಸ್ತ್ರಿ ಮುದಲಿಂಗ ಗೊರಬಾಳ, ಮಂಜುನಾಥ ಅಮ್ಮಣಗಿ, ರಮೇಶ ಮಾದರ, ರವಿ ಸಣ್ಣಕ್ಕಿ, ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ದಲಿತ ಮುಖಂಡರು ಬಾಗಿಯಾಗಿದ್ದರು.

ಇನ್ನು ಯಾವುದೆ ಅಹಿತಕರ ಘಟನೆ ನಡೆಯದಂತೆ ಪೋಲಿಸ ಇಲಾಖೆಯವರು ಬಂದೊ ಬಸ್ತ್ ಮಾಡಿದ್ದರು.

ವರದಿ:ಮನೋಹರ ಮೇಗೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ