ಇಂದು ಕಾಳಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ವರೆಗೆ ತಾಲೂಕು ಮಠಾಧೀಶರ ನೇತೃತ್ವದಲ್ಲಿ ಬೃಹತ್ ಹೋರಾಟ ಮೂಲಕ ಕಾಳಗಿ ತಾಲೂಕ ಬಂದ್ ಮಾಡಲಾಯಿತು.

ಈ ಹೋರಾಟದಲ್ಲಿ ಅನೇಕರು ಮಾತನಾಡಿದರು ನಂತರ ತಹಸೀಲ್ದಾರ್ ಕಾಳಗಿಯವರಿಗೆ ಮನವಿ ಪತ್ರ ನೀಡಲಾಯಿತು, ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ನಾಯಕರು ಮತ್ತು ಕಾಳಗಿ ತಾಲೂಕಿನ ಎಲ್ಲಾ ಗ್ರಾಮದ ಗ್ರಾಮಸ್ಥರು ಹಾಗೂ ಬಸವ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ : ಹಣಮಂತ ಕುಡಹಳ್ಳಿ

