ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ವಾರ್ಡ್ ನಂ 16 ರಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಂದ ತಹಶೀಲ್ದಾರ್ ರವರಿಗೆ ಉಪ ತಹಶೀಲ್ದಾರ್ ನಾಗರಾಜ .ಆರ್. ರವರ ಮೂಲಕ ಮನವಿ ಸಲ್ಲಿಸಿ ಕೆ.ಈ.ನರಸಿಂಹ ಮಾತನಾಡಿ ವಾರ್ಡ್ ನಂ 16 ರಲ್ಲಿ ಬರುವ ಸರ್ವೆನಂ 508 ರಲ್ಲಿ ಬರುವ ವಿವಿಧ ಜಮೀನುಗಳ ಮಾಲೀಕರು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಕೊಂಡು ಈ ಭಾಗದಲ್ಲಿ ಬರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಿರಿದಾದ ಚರಂಡಿಯನ್ನು ನಿರ್ಮಾಣ ಮಾಡಿರುವುದರಿಂದ ನಾಲಾ ರೋಡ್ ನಿಂದ ಬರುವ ಚರಂಡಿ ನೀರು ಹಾಗೂ ಸಿಮೇಂಟ್ ರೋಡ್ ಹಿರೇಬಾವಿ ನೀರು ಕೂಡ ರಾಜಕಾಲುವೆಗೆ ಸೇರುವುದರಿಂದ ರಾಜಕಾಲುವೆಯ ಒತ್ತುವರಿಯಿಂದಾಗಿ ಚರಂಡಿ ನೀರು ಸರಾಗವಾಗಿ ಹರಿದು ಹೊಗುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಮಳೆಗಾಲದಲ್ಲಿ ರಾಜಕಾಲುವೆಯ ಹತ್ತಿರದ ಈ ಭಾಗದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಅದ್ದರಿಂದ ಪುರಸಭೆ ಯಿಂದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳ್ಳಿಸಬೇಕು ಅಲ್ಲಿಯವರೆಗೂ ಈ ವಸತಿ ವಿನ್ಯಾಸದಲ್ಲಿನ ನಿವೇಶನಗಳಿಗೆ ಪರವಾನಿಗೆಯನ್ನು ನೀಡಬಾರದು ಎಂದು ಒತ್ತಾಯಿಸಿದರು.
ವೀರೇಶ.ಡಿ ಮಾಜಿ ಪುರಸಭೆ ಸದಸ್ಯರಾದ ರೇವಣಸಿದ್ದಯ್ಯಸ್ವಾಮಿ ಮದಮ್ ಬಸವರಾಜ ಲಕ್ಷ್ಮಣ ಭಂಢಾರಿ ಕೆ.ವೆಂಕಟೇಶ ಕೆ.ಎನ್.ನಾಗರಾಜ ನಾಗೇಶ ಕಬೇರ್ ಶಿವಕುಮಾರ ಸಜ್ಜನ್ ಕಾಂತಪ್ಪ ಕೃಷ್ಣ ಪಿ.ರವಿಕುಮಾರ ರಾಮಾಂಜನೇಯ್ಯ ಈರಣ್ಣ ವೆಂಕಟೇಶ ಸೇರಿದಂತೆ ಇನ್ನಿತರರು ಇದ್ದರು.


