Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಯಾಣಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತಕ್ಕೆ ಬಲಿಯಾದ ಶಿಕ್ಷಕ

Advertisement

ಹುಬ್ಬಳ್ಳಿ: ಕಲಬುರಗಿಯಿಂದ ಧಾರವಾಡಕ್ಕೆ ಪ್ರಯಾಣಿಸುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್‌ನಲ್ಲೇ ಪ್ರಯಾಣಿಕರೊಬ್ಬರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ದುಃಖದ ಘಟನೆ ಸಂಭವಿಸಿದೆ. ಧಾರವಾಡ ಮೂಲದ ಶಿಕ್ಷಕ ಸತೀಶ್ ಮರಬ್ಬ ಮೃತಪಟ್ಟ ದುರ್ದೈವಿಯಾಗಿದ್ದಾರೆ. 

ಶಿಕ್ಷಕ ಸತೀಶ್ ಅವರು ಕಲಬುರಗಿಯಿಂದ ಹುಬ್ಬಳ್ಳಿಯ ಮಾರ್ಗವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ಚಲಿಸುತ್ತಿದ್ದಾಗಲೇ ಅವರಿಗೆ ಏಕಾಏಕಿ ತೀವ್ರವಾಗಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಸತೀಶ್ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗುತ್ತಿರುವುದನ್ನು ಗಮನಿಸಿದ ಬಸ್ ಚಾಲಕ, ತಕ್ಷಣವೇ ಸಮಯಪ್ರಜ್ಞೆ ಮೆರೆದು ವಾಹನವನ್ನು ನೇರವಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯ ಕಡೆಗೆ ಚಲಾಯಿಸಿದ್ದಾರೆ.

ಚಾಲಕ ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸಲು ಶ್ರಮಿಸಿದರೂ ಸಹ, ಚಿಕಿತ್ಸೆ ಸಿಗುವ ಮುನ್ನವೇ ಸತೀಶ್ ಅವರು ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಹಾಗೂ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟ ವಿಸ್ತರಣೆ ಫಿಕ್ಸ್ : ಇಂದು ದೆಹಲಿಗೆ ಡಿ. ಕೆ ಶಿವಕುಮಾರ್ರಾಜ್ಯದಲ್ಲಿ ಬರಗಾಲ : ಪ್ರತಿ ರೈತರಿಗೆ 50,000 ರೂ. ಪರಿಹಾರ ನೀಡಬೇಕು : ಯಡಿಯೂರಪ್ಪ ಆಗ್ರಹಅಡ್ರೆಸ್ ಕೇಳುವ ನೆಪದಲ್ಲಿ ಯುವತಿ ಅಪಹರಿಸಿ ಅತ್ಯಾಚಾರ: ಮೂವರು ದುಷ್ಟರು ಅರೆಸ್ಟ್ ಎರಡು ತಲೆ, ಎರಡು ಬಾಲವಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ ಗಿರ್ ತಳಿಯ ಹಸುಮಣ್ಣಲ್ಲಿ ಮಣ್ಣಾದ ಚೆನ್ನಮ್ಮ : ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ಪ್ರಯಾಣಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತಕ್ಕೆ ಬಲಿಯಾದ ಶಿಕ್ಷಕತಾಯಿ ಚೆನ್ನಮ್ಮಗೆ ಮುತ್ತಿಟ್ಟು ಕಣ್ಣೀರಿಟ್ಟ ಕುಮಾರಸ್ವಾಮಿ ೨-೧ ರಿಂದ ಚುಟುಕು ಸರಣಿ ಗೆದ್ದ ಬಾಂಗ್ಲಾ50 ಬಾರಿ ಪ್ರಯತ್ನಿಸಿದರೂ ಸರ್ಕಾರಿ ನೌಕರಿ ಸಿಗಲಿಲ್ಲ : ಆತ್ಮಹತ್ಯೆ ಮಾಡಿಕೊಂಡ ಬಿಟೆಕ್ ಗೋಲ್ಡ್ ಮೆಡಲಿಸ್ಟ್ ಗೂಗಲ್ ಮ್ಯಾಪ್ ನೋಡಿ ಹಳ್ಳಕ್ಕೆ ಬಿದ್ದ ಕಾರು