Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಂಚಿಸಿ ಬಾಲಕಿಯನ್ನು ವಿವಾಹವಾಗಿದ್ದ ಯುವಕ ಜೈಲು ಪಾಲು

Advertisement
ಮೊಳಕಾಲ್ಮುರು: ವಸತಿ ಶಾಲೆಯೊಂದರಲ್ಲಿನ ಬಾಲಕಿಯನ್ನು ತಾನವಳ ಚಿಕ್ಕಪ್ಪ ಎಂದು ಕಥೆ ಕಟ್ಟಿ ಹಾಸ್ಟೆಲ್‌ನಿಂದ ಹೊರ ಕರೆದುಕೊಂಡು ಹೋಗಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ವಿವಾಹ ಮಾಡಿಕೊಂಡಿದ್ದ ಅನ್ಯ ಧರ್ಮಿಯ ಯುವಕ ಜೈಲು ಪಾಲಾಗಿದ್ದಾನೆ.

ಬಾಲಕಿ ಜತೆ ಹೈದರಾಬಾದ್‌ನ ರೂಂನಲ್ಲಿದ್ದ ಯುವಕನನ್ನು ಪೊಲೀಸರು ಶನಿವಾರ ಠಾಣೆಗೆ ಕರೆತಂದರು. ಬಾಲಕಿಗೆ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಪ್ರೀತಿ, ಪ್ರೇಮವೆಂದು ಬಾಲಕಿಯನ್ನು ಮರುಳು ಮಾಡಿದ್ದ ಆರೋಪಿ, ಜು.೨ರಂದು ಹಾಸ್ಟೆಲ್‌ನಿಂದ ಕರೆದೊಯ್ದಿದ್ದ. ಬಾಲಕಿಯ ತಂದೆಯ ಆರೋಗ್ಯ ಹದಗೆಟ್ಟು ಗಂಭೀರ ಸ್ಥಿತಿಗೆ ತಲುಪಿದಾಗ ಈಕೆಯ ಸೋದರ ಮಾವ ಬಾಲಕಿಯನ್ನು ಹಾಸ್ಟೆಲ್‌ನಿಂದ ಕರೆತರಲು ಹೋಗಿದ್ದರು. ಆಗ ಬಾಲಕಿ ಯುವಕನೊಂದಿಗೆ ತೆರಳಿದ ವಿಷಯ ಬಯಲಾಯಿತು. ಮಾರನೇ ದಿನವೇ ಈಕೆಯ ತಂದೆ ಕೊನೆ ಉಸಿರೆಳೆದಿದ್ದಾರೆ. ತಂದೆಯ ಸಾವಿನ ವಿಷಯ ತಿಳಿದಿದ್ದರೂ ಬಾಲಕಿ ಅಂತಿಮ ದರ್ಶನಕ್ಕೂ ಬರಲಿಲ್ಲ. ಅಂತ್ಯಕ್ರಿಯೆ ಪೂರೈಸಿದ ನಂತರ ಕುಟುಂಬ, ಬಾಲಕಿ ಕಾಣೆಯಾಗಿದ್ದಾಳೆ ಎಂದು ಜು.16ರಂದು ಮೊಳಕಾಲ್ಮುರು ಠಾಣೆಯಲ್ಲಿದೂರು ದಾಖಲಿಸಿತು. ಪ್ರಕರಣ ದಾಖಲಿಸಿಕೊಂಡಿದ್ದ ಮೊಳಕಾಲ್ಮೂರು ಪಟ್ಟಣದ ಪೊಲೀಸರು ಆರೋಪಿಯನ್ನು ಹುಡುಕಿ ಕೊನೆಗೂ ವಶಕ್ಕೆ ತೆಗೆದುಕೊಂಡಿದ್ದು ಭಾನುವಾರದಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ