ರಾಯಬಾಗ : ಹಣದ ವಿಚಾರವಾಗಿ ಯುವಕನ ಮೇಲೆ ಕಲ್ಲಿನಿಂದ ಮಾರನಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ರಾಯಭಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಖನದಾಳ ಗ್ರಾಮದ ನಾಗಪ್ಪ ಮಾಯಪ್ಪಾ ವಡ್ಡರ ಸೋದರ ಸಂಬಂಧಿ ರೋಹಿತ ವಡ್ಡರ ಎಂಬಾತ ಎರಡು ಸಾವಿರ ಹಣ ಪಡೆದಿದ್ದ ವಾರಕ್ಕೆ 2000 ರೂ ಗೆ 500 ರೂ ಬಡ್ಡಿ ನೀಡುತ್ತಿದ್ಧ ವಾರದ ಬಡ್ಡಿ ಕೊಡಲು ವಿಳಂಬವಾದ ಕಾರಣ ಕೋಪಗೊಂಡ ನಾಗಪ್ಪ ಅವಾಚ್ಯವಾಗಿ ಬೈದು ಕಲ್ಲಿನಿಂದ ಯುವಕನ ತಲೆಗೆ ಹೊಡೆದ ಅಮಾನವೀಯ ಘಟನೆ ನಡೆದಿದೆ.
ಹಲ್ಲೆಗೋಳಗಾದ ಯುವಕನನ್ನ ಹಾರೋಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಸಂಬಂಧ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಪ್ರಕರಣಗಳನ್ನು ಗಮನಿಸಿ ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಬಡ್ಡಿ ಹಾಸಿಗಾಗಿ ಇಂತಹ ರೋಮನ್ವಯ ಕೃತ್ಯ ನಡೆದಂತೆ ನೋಡಿಕೊಳ್ಳಬೇಕಾಗಿದೆ.
[video width="476" height="848" mp4="https://bharathvaibhav.com/wp-content/uploads/2024/07/WhatsApp-Video-2024-07-31-at-6.08.02-PM.mp4"][/video]
ವರದಿ : ರಾಜು ಮುಂಡೆ

