Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್​ ಇಂದು ತಡೆ

Advertisement
ನವದೆಹಲಿ: "ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರ ಎಳೆಯುವುದು, ಮತ್ತು ಆಕೆಯನ್ನು ಚರಂಡಿಗೆ ಎಳೆಯಲು ಪ್ರಯತ್ನಿಸುವುದಷ್ಟೇ ಅತ್ಯಾಚಾರ ಅಥವಾ ಅತ್ಯಾಚಾರ ಪ್ರಯತ್ನದ ಅಪರಾಧವಾಗುವುದಿಲ್ಲ" ಎಂಬ ಅಲಹಾಬಾದ್​ ಹೈಕೋರ್ಟ್​ನ ಇತ್ತೀಚಿನ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್​ ಇಂದು ತಡೆ ನೀಡಿತು.

ಮಾರ್ಚ್​ 17ರಂದು ಅಲಹಾಬಾದ್​ ಹೈಕೋರ್ಟ್​ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್​ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್​.ಗವಾಯಿ ಮತ್ತು ಆಗಸ್ಟೀನ್​ ಜಾರ್ಜ್​ ಮಸಿಹ್​ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸಿತು.

'ವಿ ದಿ ವುಮೆನ್ ಆಫ್​ ಇಂಡಿಯಾ' ಎಂಬ ಸಂಘಟನೆಯು ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದ ನಂತರ ಸ್ವಯಂಪ್ರೇರಿತ ಪ್ರಕರಣವಾಗಿ ಕೈಗೆತ್ತಿಗೊಂಡು ವಿಚಾರಣೆ ಪ್ರಾರಂಭಿಸಲಾಗಿದೆ ಎಂದು ಪೀಠ ಹೇಳಿದೆ.

"ಈ ತೀರ್ಪು ಅಲಹಾಬಾದ್​ ಹೈಕೋರ್ಟ್​ನ ನ್ಯಾಯಾಧೀಶರ ಸಂಪೂರ್ಣ ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತಿದೆ" ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

ಕೇಂದ್ರ, ಯುಪಿ ಸರ್ಕಾರಕ್ಕೆ ನೋಟಿಸ್​: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ ಸುಪ್ರೀಂ ನೋಟಿಸ್​ ಜಾರಿ ಮಾಡಿದೆ. ಜೊತೆಗೆ ಅಟಾರ್ನಿ ಜನರಲ್​ (ಎಜಿ) ಆರ್​.ವೆಂಕಟರಮಣಿ ಮತ್ತು ಸಾಲಿಸಿಟರಲ್​ ಜನರಲ್​ (ಎಸ್​ಜಿ) ತುಷಾರ್​ ಮೆಹ್ತಾ ಅವರ ಸಹಾಯ ಕೋರಿತು.

ತೀರ್ಪು ಏನಾಗಿತ್ತು?: ಬಾಲಕಿಯ ಸ್ತನಗಳನ್ನು ಹಿಡಿಯುವುದು, ಅವಳ ಪೈಜಾಮದ ದಾರವನ್ನು ಎಳೆಯುವುದು, ಅವಳನ್ನು ಚರಂಡಿಯ ಕೆಳಗೆಳೆಯಲು ಪ್ರಯತ್ನಿಸುವುದು ಅತ್ಯಾಚಾರ ಯತ್ನ ಆರೋಪಗಳನ್ನು ಹೊರಿಸಲು ಸಾಕಾಗುವುದಿಲ್ಲ. ಈ ಕೃತ್ಯಗಳು ಕೇವಲ ಸಿದ್ಧತೆಯಷ್ಟೇ. ಇದು ಕೃತ್ಯ ಮಾಡಲು ನಿಜವಾದ ಪ್ರಯತ್ನಕ್ಕಿಂತ ಭಿನ್ನವಾಗಿದೆ ಎಂದು ಅಲಹಾಬಾದ್​ ಹೈಕೋರ್ಟ್​ ಹೇಳಿತ್ತು. ಇಬ್ಬರು ಆರೋಪಿಗಳು ಅಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್​ ಹೈಕೋರ್ಟ್​ನ ನ್ಯಾಯಮೂರ್ತಿ ರಾಮ್​ ಮನೋಹರ್​ ನಾರಾಯಣ್​ ಮಿಶ್ರಾ ಅವರಿದ್ದ ಏಕಪೀಠ ಮಾರ್ಚ್​ 17ರಂದು ಈ ತೀರ್ಪು ನೀಡಿತ್ತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ