LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೆಂಗಳೂರಿನಲ್ಲಿ 106% ಏರಿದ ವಾಯು ಮಾಲಿನ್ಯ: ಪಟಾಕಿ ಶಬ್ದಕ್ಕೆ ಸತ್ತು ಬಿದ್ದ ಪಕ್ಷಿಗಳು 

Advertisement

ಬೆಂಗಳೂರು : ದೇಶದ ರಾಜಧಾನಿ ದೆಹಲಿ ಬೆನ್ನಲ್ಲೇ ಇದೀಗ ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಿನಲ್ಲೂ ವಾಯು ಮಾಲಿನ್ಯದ ಮಟ್ಟ ಅಪಾಯಕಾರಿ ರೀತಿಯಲ್ಲಿ ಏರಿಕೆಯಾಗಿದೆ. 

ದೀಪಾವಳಿ ಹಬ್ಬದ ನಿಮಿತ್ತ ಸಾರ್ವಜನಿಕರು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸುತ್ತಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಪರಿಸರ ತಜ್ಞ ರವಿನಾರಾಯಣ ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಸರ ತಜ್ಞ ರವಿನಾರಾಯಣ ಅವರು ನೀಡಿರುವ ಮಾಹಿತಿಯಂತೆ, ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಭಾರಿ ಅಂತರದಲ್ಲಿ ಹೆಚ್ಚಿದ್ದು 480% ಕ್ಕೆ ತಲುಪಿದೆ. ಇತ್ತ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇವಲ 38-40% ಇದ್ದ ಮಾಲಿನ್ಯದ ಪ್ರಮಾಣ, ದೀಪಾವಳಿ ಪಟಾಕಿಯ ಅಬ್ಬರದಿಂದಾಗಿ ಏಕಾಏಕಿ 106% ಕ್ಕೆ ಏರಿಕೆಯಾಗಿದೆ.

ಅಸ್ತಮಾ ರೋಗಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ

ಸಿಲಿಕಾನ್ ಸಿಟಿಯಲ್ಲಿ ಏಕಾಏಕಿ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದರಿಂದ ಅಸ್ತಮಾ, ಉಸಿರಾಟದ ತೊಂದರೆ ಮತ್ತು ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಭಾರಿ ತೊಂದರೆಯಾಗುತ್ತಿದೆ.

ಪಟಾಕಿಗಳಿಂದ ಹೊರಹೊಮ್ಮುವ ವಿಷಕಾರಿ ಹೊಗೆಯು ಭೂಮಿಯ ವಾತಾವರಣವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ, ಕೊನೆಗೆ ಅದನ್ನು ನಾವೇ ಉಸಿರಾಡಬೇಕಾಗುತ್ತದೆ. ಇದರಿಂದ ದೀರ್ಘಕಾಲದ ತೀವ್ರ ಆರೋಗ್ಯ ಸಮಸ್ಯೆಗಳು (Side Effects) ಎದುರಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪಟಾಕಿಯ ಶಬ್ದ ಮತ್ತು ಹೊಗೆಯಿಂದ ಕೇವಲ ಮಾನವರಷ್ಟೇ ಅಲ್ಲದೆ ಮೂಕ ಪ್ರಾಣಿ-ಪಕ್ಷಿಗಳೂ ಸಂಕಷ್ಟಕ್ಕೆ ಸಿಲುಕಿವೆ. ರಾತ್ರಿ ವೇಳೆಯಲ್ಲಿ ಎಲ್ಲಿಗೂ ಹಾರಿಕೊಂಡು ಹೋಗಲಾಗದ ಪಕ್ಷಿಗಳು ತಾವು ವಾಸವಾಗಿದ್ದ ಮರದ ಕೊಂಬೆಗಳ ಮೇಲೆಯೇ ಕುಳಿತು, ಪಟಾಕಿಯ ಕಿವಿಮುrowಚುವ ಶಬ್ದಕ್ಕೆ ಎದೆಯೊಡೆದು ಮರದ ಮೇಲಿಂದ ಬಿದ್ದು ಪ್ರಾಣ ಬಿಡುತ್ತಿವೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನಲ್ಲಿದ್ದಾಗ ಛಲವಾದಿ, ಬಿಜೆಪಿಗೆ ಹೋದ ಮೇಲೆ ಮನುವಾದಿ : ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಆಕ್ರೋಶ ಬೆಂಗಳೂರು ಮೆಟ್ರೋ, ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆಜಿಂಬಾಬೆ- ಅಪಘಾನಿಸ್ತಾನ್ ಮೊದಲ ಟೆಸ್ಟ್ ಡ್ರಾ ದಲ್ಲಿ ಅಂತ್ಯ ಭೀಕರ ಅಗ್ನಿ ಅವಘಡ : 40ಕ್ಕೂ ಹೆಚ್ಚು ಗುಡಿಸಲು, ಅಂಗಡಿಗಳು ಸುಟ್ಟು ಭಸ್ಮಮಗಳಿಗೆ ಅಂತರ್ಜಾತಿ ಮದುವೆ ಮಾಡಿಸಿದ ಜ್ಯೋತಿಷಿಯ ಪ್ರಾಣ ತೆಗೆದ ತಂದೆಕಾನೂನು ಅರಿವಿನಿಂದ ಉತ್ತಮ ನಾಗರಿಕರಾಗಿ ಆನಂದ ಹೆಚ್. ಕೊಣ್ಣೂರುಕಾನೂನು ಅರಿವಿನಿಂದ ಉತ್ತಮ ನಾಗರಿಕರಾಗಿ ಆನಂದ ಹೆಚ್. ಕೊಣ್ಣೂರುಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ : ಸಚಿವ ಸಂತೋಷ ಲಾಡ್ಬೇಡಕಿಹಾಳದ ವೆಂಕಟೇಶ್ವರ ಪಾವರ್ ಪ್ರಾಜೆಕ್ಟ್ ಸಕ್ಕರೆ ಕಾರ್ಖಾನೆ ಯಿಂದ ರಾಜ್ಯದಲ್ಲಿಯೇ ಪ್ರತಿ ಟನ್ ಕಬ್ಬಿಗೆ 4200 ರೂಪಾಯಿ ದಾಖಲೆ ದರ ಘೋಷಣೆ  ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ಗೆ 1-0 ಟೆಸ್ಟ್ ಸರಣಿ ಜಯ