LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೆಂಗಳೂರು ಮೆಟ್ರೋ, ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆ

Advertisement

 ಹುಬ್ಬಳ್ಳಿ/ಬೆಳಗಾವಿ: ರಾಜ್ಯದ ಜನರಲ್ಲಿ ಆತಂಕ ಮೂಡಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು, ಇದರ ಬೆನ್ನಲ್ಲೇ ಬೆಂಗಳೂರು ಮೆಟ್ರೋ ಹಾಗೂ ಖ್ಯಾತ ಗಾಯಕ ದಿಲ್‌ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮವನ್ನೂ ಗುರಿಯಾಗಿಸಿಕೊಂಡು ಸ್ಫೋಟದ ಎಚ್ಚರಿಕೆ ನೀಡಲಾಗಿದೆ.

ಅಷ್ಟೇ ಅಲ್ಲ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸದ ಬಗ್ಗೆಯೂ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ನವೆಂಬರ್ 9ರಂದು ಬಂದಿರುವ ಈ ಬೆದರಿಕೆ ಸಂದೇಶಗಳು ಪೊಲೀಸ್ ಇಲಾಖೆ ಮತ್ತು ಭದ್ರತಾ ಸಿಬ್ಬಂದಿಯನ್ನು ತಕ್ಷಣವೇ ಕಾರ್ಯಪ್ರವೃತ್ತರನ್ನಾಗಿಸಿವೆ. ಎರಡೂ ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳಗಳಿಂದ ತೀವ್ರ ತಪಾಸಣೆ ನಡೆಸಲಾಗಿದೆ.

ಪಾಲಿಕೆ ಕಚೇರಿಗಳಿಗೆ ಬಂದಿದ್ದೇನು ಬೆದರಿಕೆ?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಅಧಿಕೃತ ಇ-ಮೇಲ್ ವಿಳಾಸಕ್ಕೆ ಬೆಳಗ್ಗೆ ಸುಮಾರು 11.35ರ ವೇಳೆಗೆ ‘ವೆಯಿಟ್ ಸ್ಮಿತ್’ ಎಂಬ ಹೆಸರಿನ ಜಿಮೇಲ್ ಖಾತೆಯಿಂದ ಬೆದರಿಕೆ ಸಂದೇಶ ಬಂದಿದೆ. ಇದರಲ್ಲಿ ಖಲಿಸ್ತಾನ್ ನ್ಯಾಷನಲ್ ಆರ್ಮಿ ಮತ್ತು ಬಬರ್ ಖಾಲ್ಸಾ ಸಂಘಟನೆಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. 1984ರ ಸಿಖ್ ದಂಗೆಯ ವಿಚಾರ ಹಾಗೂ ಖಲಿಸ್ತಾನ್ ಪರ ಘೋಷಣೆಗಳನ್ನೂ ಸಂದೇಶದಲ್ಲಿ ಸೇರಿಸಲಾಗಿದೆ.

ಇದೇ ಮಾದರಿಯ ಬೆದರಿಕೆ ಇ-ಮೇಲ್ ಬೆಳಗಾವಿಯ ಸುಭಾಷ್ ನಗರದ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಗೂ ಬಂದಿದೆ. ಪಾಲಿಕೆ ಕಟ್ಟಡದ ಆವರಣದಲ್ಲಿ ಬಾಂಬ್ ಇರಿಸಿರುವುದಾಗಿ ಸಂದೇಶದಲ್ಲಿ ಎಚ್ಚರಿಸಲಾಗಿದೆ.

ಸಿಬ್ಬಂದಿ, ಕಾರ್ಪೊರೇಟರ್‌ಗಳನ್ನು ಹೊರಗೆ ಕಳುಹಿಸಿದ ಪೊಲೀಸರು

ಬೆದರಿಕೆ ಇ-ಮೇಲ್ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಎರಡೂ ನಗರಗಳ ಪಾಲಿಕೆ ಕಚೇರಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯಲ್ಲಿದ್ದ ಸಿಬ್ಬಂದಿ ಮತ್ತು ಕಾರ್ಪೊರೇಟರ್‌ಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನಲ್ಲಿದ್ದಾಗ ಛಲವಾದಿ, ಬಿಜೆಪಿಗೆ ಹೋದ ಮೇಲೆ ಮನುವಾದಿ : ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಆಕ್ರೋಶ ಬೆಂಗಳೂರು ಮೆಟ್ರೋ, ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆಜಿಂಬಾಬೆ- ಅಪಘಾನಿಸ್ತಾನ್ ಮೊದಲ ಟೆಸ್ಟ್ ಡ್ರಾ ದಲ್ಲಿ ಅಂತ್ಯ ಭೀಕರ ಅಗ್ನಿ ಅವಘಡ : 40ಕ್ಕೂ ಹೆಚ್ಚು ಗುಡಿಸಲು, ಅಂಗಡಿಗಳು ಸುಟ್ಟು ಭಸ್ಮಮಗಳಿಗೆ ಅಂತರ್ಜಾತಿ ಮದುವೆ ಮಾಡಿಸಿದ ಜ್ಯೋತಿಷಿಯ ಪ್ರಾಣ ತೆಗೆದ ತಂದೆಕಾನೂನು ಅರಿವಿನಿಂದ ಉತ್ತಮ ನಾಗರಿಕರಾಗಿ ಆನಂದ ಹೆಚ್. ಕೊಣ್ಣೂರುಕಾನೂನು ಅರಿವಿನಿಂದ ಉತ್ತಮ ನಾಗರಿಕರಾಗಿ ಆನಂದ ಹೆಚ್. ಕೊಣ್ಣೂರುಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ : ಸಚಿವ ಸಂತೋಷ ಲಾಡ್ಬೇಡಕಿಹಾಳದ ವೆಂಕಟೇಶ್ವರ ಪಾವರ್ ಪ್ರಾಜೆಕ್ಟ್ ಸಕ್ಕರೆ ಕಾರ್ಖಾನೆ ಯಿಂದ ರಾಜ್ಯದಲ್ಲಿಯೇ ಪ್ರತಿ ಟನ್ ಕಬ್ಬಿಗೆ 4200 ರೂಪಾಯಿ ದಾಖಲೆ ದರ ಘೋಷಣೆ  ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ಗೆ 1-0 ಟೆಸ್ಟ್ ಸರಣಿ ಜಯ