Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ಥಿಕತೆಯನ್ನು ಆಲಿಬಾಬಾ 40 ಕಳ್ಳರ ರೀತಿ ಹಾಳು ಮಾಡಿದರು : ಆರ್. ಅಶೋಕ್ 

Advertisement

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಡ್ರೈವರ್ ಬದಲಾಗಿದ್ದಾರೆ ಅಷ್ಟೇ, ಬಸ್, ಎಂಜಿನ್ ಕೆಟ್ಟು ಹೋಗಿದೆ. ಡ್ರೈವರ್ ಬದಲಾದರೇನು? ಕೆಟ್ಟು ಹೋಗಿರೋ ಬಸ್ ಓಡಲು ಸಾಧ್ಯವೇ? ಇದು ಕೆಟ್ಟು ಹೋಗಿರೋ ಗಾಡಿ ಎಂದು ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಸಿದ್ದರಾಮಯ್ಯ ಅವರು ಕೆಟ್ಟು ಹೋಗಿರೋ ಗಾಡಿ ಡಿಕೆಶಿಗೆ ಕೊಟ್ಟಿದ್ದಾರೆ. ಸಾಲ ಮಾಡಿ ಡಿಸೇಲ್ ಹಾಕಿಸುವ ಬಸ್ ಅನ್ನ ಸಿದ್ದರಾಮಯ್ಯ ಡಿಕೆಶಿಗೆ ಕೊಟ್ಟಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನಾನು ಅಹಿಂದ ನಾಯಕ ಅಂತಿದ್ದರು. ದೇಶದಲ್ಲಿ ನಾನೊಬ್ಬನೇ ಅಹಿಂದ ಸಿಎಂ ಇರೋದು ಅಂತ ಹೇಳ್ತಾ ಇದ್ದರು.

ನನ್ನನ್ನ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಅಂತ ಕಾನ್ಫಿಡೆನ್ಸ್‌ನಲ್ಲಿ ಇದ್ದರು. ರಾಹುಲ್ ಗಾಂಧಿ ಕಿತಾಪತಿಯಿಂದ ಈಗ ಸ್ಥಾನ ಹೋಗಿದೆ‌ ಎಂದರು.

ರಾಹುಲ್‌ ಗಾಂಧಿಯವರ ಪೂಜ್ಯ ತಂದೆ ರಾಜೀವ್‌ ಗಾಂಧಿ ಅವರು ವೀರೇಂದ್ರ ಪಾಟೀಲ್‌ರನ್ನ ಕಿತ್ತು ಹಾಕಿದ್ರು. ಇಂದಿರಾ ಗಾಂಧಿ ದೇವರಾಜ್ ಅರಸ್, ಬಂಗಾರಪ್ಪ ಅವರನ್ನ ಕಿತ್ತಾಕಿದ್ರು.

ಇದು ಕಾಂಗ್ರೆಸ್ ಕಿತ್ತಾಕಿರೋ ಸಂಸ್ಕೃತಿ. ದೇವರಾಜ್ ಅರಸ್, ಬಂಗಾರಪ್ಪ, ಸಿದ್ದರಾಮಯ್ಯ ಹಿಂದುಳಿದವರು. ಕಾಂಗ್ರೆಸ್ ದೇಶದಲ್ಲಿ ಬ್ಯಾಕ್ ವರ್ಡ್ ಸಮುದಾಯವನ್ನ ಗೋ ಬ್ಯಾಕ್ ಮಾಡ್ತಿದೆ. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿ ಆಗಿದೆ ಎಂದು ಕಿಡಿಕಾರಿದ್ದಾರೆ.

ನನಗೆ ಇರೋ ಮಾಹಿತಿ ಪ್ರಕಾರ, 3 ತಿಂಗಳು ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಭಿಕ್ಷೆ ಬೇಡಿದ್ರು. 3 ತಿಂಗಳು ಅಲ್ಲ 3 ದಿನ ಕೊಡಲ್ಲ ಅಂತ ಹೇಳಿ ಇಳಿಸಿದ್ದಾರೆ.

ಇದು ಪಕ್ಕಾ ಮಾಹಿತಿ. ಇನ್ನು ಮುಂದೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಕರೆಯಬಾರದು. ಕುರುಬರು ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ಜನ ಮುಂದೆ ಪಾಠ ಕಾಲಿಸ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಸಿಎಂ ಬದಲಾವಣೆ ಆದ್ರೆ ಫೈನಾನ್ಸ್‌ನಲ್ಲಿ ‌ಇರೋ‌ ಲೆಕ್ಕ ಪತ್ರ ಬದಲಾಗುತ್ತಾ? ನಮ್ಮ ರಾಜ್ಯದ ಸಾಲ 7.54 ಲಕ್ಷ ರೂ. ಕೋಟಿ. ಆದಾಯದಕ್ಕಿಂತ ಸಾಲ ಜಾಸ್ತಿ ಇದೆ. ಸಾಲ ಜಾಸ್ತಿ ಮಾಡಿದ್ದೆ ಸಿದ್ದರಾಮಯ್ಯ. ಬೊಮ್ಮಾಯಿ ಸರ್ ಫ್ಲಸ್ ಬಜೆಟ್ ಮಂಡನೆ ಮಾಡಿದ್ರು. ಈಗ ಸಿದ್ದರಾಮಯ್ಯ ಸಾಲ ಮಾಡಿದ್ದಾರೆ. 

ಡಿಕೆ ಶಿವಕುಮಾರ್ ಅವರೇ ಈ ಸಾಲ ತೀರಿಸುವವರು ಯಾರು? ಮುಂದಿನ ಪೀಳಿಗೆ ತೀರಿಸಬೇಕಾ? ನೀವೇ ತೀರಿಸ್ತೀರಾ? ಈ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ. ನಾವು ಇದ್ದಾಗ 86 ಸಾವಿರ ಕೋಟಿ ರೂ. ಅಭಿವೃದ್ಧಿಗೆ ಅಂತ ಪ್ರತಿ ವರ್ಷ ಖರ್ಚು ಮಾಡ್ತಾ ಇದ್ವಿ. ಇವರು ಅವೈಜ್ಞಾನಿಕ ಗ್ಯಾರಂಟಿ ತಂದಿದ್ದರಿಂದ ಅಭಿವೃದ್ಧಿಗೆ ಹಣ ಇಲ್ಲದಂತೆ ಆಗಿದೆ.

 ಬಿಜೆಪಿ ಅವಕಾಶ ಇದ್ದರೂ ಸಾಲ ಪಡೆಯಲಿಲ್ಲ. ನಾವು ಸಂವೃದ್ದಿ ಕರ್ನಾಟಕವನ್ನು ಕಾಂಗ್ರೆಸ್‌ಗೆ ಕೈಗೆ ಕೊಟ್ಟಿದ್ವಿ. ಆದರೆ ಕಾಂಗ್ರೆಸ್ ಅವರು ಆರ್ಥಿಕತೆಯನ್ನು ಆಲಿಬಾಬಾ 40 ಕಳ್ಳರ ರೀತಿ ಹಾಳು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ, ಡಿಕೆಶಿ ಕಾಲಿಗೆ ಬಿದ್ದಾಗ ಬಸ್ಮಾಸುರ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಅಂಡ್ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕರ್ನಾಟಕವನ್ನು ಸಾಲದ ಕರ್ನಾಟಕಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೇಂದ್ರ ಸರ್ಕಾರದವರು ಅಭಿವೃದ್ಧಿಗೆ ಸಾಲ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ಅಭಿವೃದ್ಧಿಗೆ ಸಾಲ ಮಾಡಿಲ್ಲ. ರಸ್ತೆ ಹಾಳಾಗಿದೆ.

ಬೆಂಗಳೂರು ಗಾರ್ಬೇಜ್ ವಾಸನೆ ಬರ್ತಿದೆ. ಈ ಸರ್ಕಾರ ಐಸಿಯುನಲ್ಲಿ ಇದೆ. ಐಸಿಯುಗೆ ಆಕ್ಸಿಜನ್ ಬೇಕು. ಈ ಆಕ್ಸಿಜನ್‌ಗಾಗಿ ಸಾಲ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಟ್ಟು ಹೋಗಿರೋ ಲಾರಿ ಇದು. ನುಡಿದಂತೆ ನಡೆದ ಅಂತ ಹೊಗಳಿದ್ದೇ ಹೊಗಳಿದ್ದು. ಅಪರಾಧದಿಂದ ಮುಕ್ತ ಆಗೋಕೆ ಸಿದ್ದರಾಮಯ್ಯ ಸ್ಥಾನ ಬಿಟ್ಟಿದ್ದಾರೆ.

ವೈಲೈಂಟ್ ಆಗದೆ ಸೈಲೆಂಟ್ ಆಗಿ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಾ? ಮೇಕೆದಾಟಿಗೆ ಹಣ ಎಲ್ಲಿಂದ ತರುತ್ತೀರಾ? ಕೃಷ್ಣೆಗೆ ಹಣ ಕೊಡ್ತೀರಾ? ಅಂತ ಪ್ರಶ್ನೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗೋ ಕನಸಿತ್ತು. ಕನಸು ಸಾಕಾರ ಆಗಿ ವೈಯಕ್ತಿಕವಾಗಿ ಲಾಭ ಆಗಿದೆ ಎಂದು ಹೇಳಿದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವತಂತ್ರ ಪಕ್ಷ ಕಟ್ಟಲಿದ್ದಾರಂತೆ ಅಣ್ಣಾಮಲೈವೈಭವ್ ಸೂರ್ಯವಂಶಿ ಸರಣಿ ಶ್ರೇಷ್ಠನಾಳೆ ಪಾಕ್- ಕಾಂಗರೂ ದ್ವಿತೀಯ ಏಕದಿನ ಪಂದ್ಯಆರ್ಥಿಕತೆಯನ್ನು ಆಲಿಬಾಬಾ 40 ಕಳ್ಳರ ರೀತಿ ಹಾಳು ಮಾಡಿದರು : ಆರ್. ಅಶೋಕ್ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ : ಯು.ಟಿ ಖಾದರ್ ಜೆಇಇ ಅಡ್ವಾನ್ಸ್‌ ಪರೀಕ್ಷೆ: ಪಿಡ್ಬ್ಲೂಡಿ ಕೋಟಾದಲ್ಲಿ ಮೊದಲ ರ್ಯಾಂಕ್‌ ಪಡೆದ ವಿಶ್ವರಾಜ ಮರಪಳ್ಳಿಇಂದಿನಿಂದ 4 ರಾಜ್ಯಸಭಾ ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಬಸವ ತತ್ವಗಳು ಸಮಾಜಕ್ಕೆ ದಾರಿದೀಪ: ಬೆಳಗಾವಿಯಲ್ಲಿ 'ಬಸವಾದಿ ಶರಣರ ವಿಚಾರ ಸಂಕಿರಣ' ಯಶಸ್ವಿಗಡಿಯಲ್ಲಿ ಕನ್ನಡ ಉಳಿವಿಗಾಗಿ ಕನ್ನಡ ಭಾಷಾ ಅತಿಥಿ ಶಿಕ್ಷಕರಿಗೆ ಪ್ರಥಮ ಆದ್ಯತೆ ನಿಡಲು ಮನವಿ   ಸರ್ಕಾರಿ ಸೌಲಭ್ಯ ಬಳಸಿಕೊಂಡು ಅಧ್ಯಯನ ಮಾಡಿ ಸಾಧಕರಾಗಿ : ಬಿಇಒ ಸೋಮಶೇಖರ್