ಸಿರುಗುಪ್ಪ : ನಗರದ ಸಿ.ಡಿ.ಪಿ.ಓ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕಾಡಳಿತ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಿರಸ್ಥೆದಾರ ಸಿದ್ದಾರ್ಥ್ ಕಾರಂಜಿ ಅವರು 12ನೇ ಶತಮಾನದಲ್ಲಿನ ಅಸಮಾನತೆ, ಜಾತಿ, ಮತಬೇದ ಹೋಗಲಾಡಿಸಿ ಸಮ ಸಮಾಜದ ನಿರ್ಮಾಣಕ್ಕೆ ಮುಂದಾದ ಬಸವಣ್ಣರು ಆರಂಭಿಸಿದ ಅನುಭವ ಮಂಟಪದ ಶರಣರಲ್ಲಿ ಹಡಪದ ಅಪ್ಪಣ್ಣ ಅವರ ಪಾತ್ರವು ಬಹು ಮುಖ್ಯವಾಗಿತ್ತು. ಇಂದು ನಾವೆಲ್ಲಾ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಹೋಗಬೇಕಿದೆಂದು ತಿಳಿಸಿದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಅವರು ಮಾತನಾಡಿ ಹಿಂದುಳಿದ ಅಬಿವೃದ್ದಿ ನಿಗಮದಲ್ಲಿ ಹಲವಾರು ಯೋಜನೆಗಳಿವೆ. ವಿದ್ಯಾರ್ಥಿಗಳು ಮತ್ತು ಸಮಾಜದವರು ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಹೆಚ್.ಪಿ. ವೀರಣ್ಣ ಅವರು ಸಮಾಜಕ್ಕೆ ಪ್ರತ್ಯೇಕ ಸಮುದಾಯ ಭವನ, ನಿವೇಶನಗಳು, ಕಾರ್ಮಿಕ ಗುರುತಿನ ಚೀಟಿ, ಸೇರಿದಂತೆ ಇನ್ನಿತರ ಶೈಕ್ಷಣಿಕ ಸೌಲಭ್ಯಗಳಿಗೆ ಮನವಿ ಮಾಡಿದರು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ಕಾರ್ಮಿಕ ಇಲಾಖೆಯ ನಿರೀಕ್ಷಕ ತಿರುಮಲೇಶ್ ಹಡಪದ ಅಪ್ಪಣ್ಣ ಸಮಾಜದ ಗೌರವಾಧ್ಯಕ್ಷ ಹೆಚ್.ಕೆ. ನಾಗರಾಜ ಉಪಾಧ್ಯಕ್ಷ ಬಸಪ್ಪ, ಹಾಗೂ ಸಮಾಜದವರು ಹಾಗೂ ಇನ್ನಿತರ ಇಲಾಖೆಗಳ ಸಿಬ್ಬಂದಿಗಳು ಇದ್ದರು.


