ಕಾಗವಾಡ : ಶಿಕ್ಷಕರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದ್ದು, ಕೂಡಲೇ ತಾಲೂಕಿನ ಶಿರಗುಪ್ಪಿ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಮುಖ್ಯ ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಿರಗುಪ್ಪಿ ಗ್ರಾಮಸ್ಥರು ಹಾಗೂ ಶಾಲೆಯ ಮಕ್ಕಳ ಪಾಲಕರು ಡಿಡಿಪಿಐ ಆರ್.ಎಸ್. ಸಿತಾರಾಮನ ಹಾಗೂ ಕಾಗವಾಡ ಬಿಇಓ ಚನ್ನಿಗರಾಮಪ್ಪ ಅವರಿಗೆ ಗುರುವಾರ ದಿ. 30 ರಂದು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಪಾಲಕ ಬಾಳು ವಡ್ಡರ ಮಾತನಾಡಿ, ಶಿರಗುಪ್ಪಿ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರು ಅದೇ ಶಾಲೆಯ ಸಹ ಶಿಕ್ಷಕರ ವಿರುದ್ಧ ತಕರಾರು ಮಾಡಲು ಪ್ರೇರೇಪಿಸುತ್ತಾರೆ. ಶಾಲೆಯ ಗಣಿತ ಶಿಕ್ಷಕಿಯರು (ಕನ್ನಡ ಮಾಧ್ಯಮ) ಇವರು ನಮ್ಮ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತಾರೆ. ಅವರ ಬಗ್ಗೆ ನಮ್ಮಗೆ ಯಾವುದೇ ರೀತಿಯ ತಕರಾರು ಇರುವುದಿಲ್ಲ. ಸದರಿ ಮುಖ್ಯೋಪಾಧ್ಯಾಯರು ಇದೇ ಶಾಲೆಯಲ್ಲಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಆದಕಾರಣ ಸಂಬಂಧಪಟ್ಟವರ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಈ ವಿಷಯ ಬಗ್ಗೆ ಕೆಲ ತಿಂಗಳ ಹಿಂದೆ ಶಾಸಕ ರಾಜು ಕಾಗೆ ಅವರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಧ್ವನಿಎತ್ತಿ ಮುಖ್ಯ ಶಿಕ್ಷಕರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಸಹ ಮೇಲಾಧಿಕಾರಿಗಳು ಮುಖ್ಯೋಪಾಧ್ಯಾಯರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಹಾದೇವ ಉದಗಾಂವೆ, ದೀಪಕ ಕಾಂಬಳೆ, ಅಶೋಕ ಕಾಂಬಳೆ, ಮಹಾಂತೇಶ ವರಾಳೆ, ನೀತಿನ ಕಾಂಬಳೆ,ರಾಜು ಕಾಂಬಳೆ ಯಲ್ಲಪಾ ಕಾಂಬಳೆ, ಅಕ್ಷಯ ಮೇತ್ರೆ,ಸೇರಿದಂತೆ ಅನೇಕರು ಇದ್ದರು.


