ಹುಬ್ಬಳ್ಳಿ: ಪತ್ನಿ ಮತ್ತು ಪೊಲೀಸರ ಕಿರುಕುಳದಿಂದ ಬೇಸತ್ತ ಅಟೋ ಚಾಲಕನೊಬ್ಬ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗೇರಿಯ ಕೆಂಚಪ್ಪನ ತೋಟದ ಬಳಿಯ ಹರಿಜನ ಕಾಲೋನಿಯಲ್ಲಿ ಸಂಭವಿಸಿದೆ.
ಸಂತೋಷ್ ಹಳ್ಳೂರ (೩೯) ಎಂಬಾತನೆ ಆತ್ಮಹತ್ಯೆಗೆ ಶರಣಾದವನಾಗಿದ್ದಾನೆ.ಸಂತೋಷನ ಸಾವಿಗೆ ಆತನ ಪತ್ನಿ ಹಾಗೂ ಮಹಿಳಾ ಠಾಣೆಯ ಪೊಲೀಸರ ಕಿರುಕುಳ ಎಂದು ಕುಟುಂಬಸ್ಥರು ಆರೋಪಿಸಿ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬAಧಿಸಿದAತೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಈ ಸಂದರ್ಭದಲ್ಲಿ ಓಣಿಯ ನೂರಾರು ಜನರು, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮುಂತಾದವರಿದ್ದರು.
ಮೃತ ಸಂತೋಷ್ ಹಾಗೂ ಲಲಿತಾ ಸುಮಾರು ೧೮ ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಇಬ್ಬರು ಗಂಡು ಹಾಗೂ ಒರ್ವ ಮಗಳಿದ್ದು, ಪತ್ನಿಗೆ ಅಂಗನವಾಡಿಯಲ್ಲಿ ನೌಕರಿ ಕೊಡಿಸಿದ ನಂತರ ನೆಮ್ಮದಿಯಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿತೆನ್ನಲಾಗಿದೆ.
ಪತಿಗೆ ತಿಳಿಸದೇ ಪತ್ನಿ ಊರೂರು ಸುತ್ತಾಡುತ್ತಿದ್ದುದನ್ನು ಪ್ರಶ್ನಿಸಿದ್ದರಿಂದ ಈ ವಿಚಾರದಲ್ಲಿ ಹಲವು ಸಲ ಜಗಳವಾಗುತ್ತಿತ್ತು. ಪತ್ನಿ ಲಲಿತಾ ಅವರು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಳಲ್ಲದೇ ತಾನು ಪತಿಯ ಜೊತೆ ಸಂಸಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಲಲಿತಾ, ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.
ಪತ್ನಿ ಲಲಿತಾ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯ ಪೊಲೀಸರು ಸಂತೋಷ್‌ನನ್ನು ಕಿರುಕುಳ ನೀಡಿದ್ದಾರೆ ಎಂದು ಮೃತ ಸಂತೋಷ್ ಕುಟುಂಬದವರು ಆರೋಪಿಸುತ್ತಾರೆ. ಹೀಗಿರುವಾಗಲೇ ಸಂತೋಷ ಮಧ್ಯರಾತ್ರಿ ನಂತರ ನೇಣು ಹಾಕಿಕೊಂಡಿದ್ದು ಮೃತ ದೇಹ ಕೆಎಂಸಿಯಲ್ಲಿದ್ದು, ಪತ್ನಿ ಬಂಧಿಸುವವರೆಗೆ ಶವ ಒಯ್ಯವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ
ವರದಿ:ಸುಧೀರ್ ಕುಲಕರ್ಣಿ


