ಮದ್ಯಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಯಾದ ಹಿನ್ನೆಲೆಯಲ್ಲಿ ಸ್ಕಾಚ್ ವಿಸ್ಕಿ ಹಾಗೂ ಜಿನ್ ಮೇಲಿನ ಆಮದು ಸುಂಕವನ್ನು 150%ರಿಂದ 75%ಕ್ಕೆ ಇಳಿಸಲಾಗಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಬೆಲೆ 15ರಿಂದ 20 ಶೇಕಡಾವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ.
150 ರಿಂದ ನೇರವಾಗಿ ಶೇ. 75 ಕ್ಕೆ ತಗ್ಗಿಸಲಾಗಿದೆ.
ಅಷ್ಟೇ ಅಲ್ಲದೆ, ಮುಂಬರುವ 10 ವರ್ಷಗಳಲ್ಲಿ ಈ ಆಮದು ಸುಂಕವನ್ನು ಹಂತ ಹಂತವಾಗಿ ಶೇ. 40 ಕ್ಕೆ ಇಳಿಸುವ ಬೃಹತ್ ಯೋಜನೆಯನ್ನೂ ರೂಪಿಸಲಾಗಿದೆ.
ಬೆಲೆ ಎಷ್ಟು ಕಡಿಮೆಯಾಗಬಹುದು?
ಸರಕು ಮತ್ತು ವ್ಯಾಪಾರ ವಲಯದ ತಜ್ಞರ ಪ್ರಕಾರ, ಈ ಸುಂಕ ಕಡಿತದಿಂದಾಗಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಬೆಲೆಗಳಲ್ಲಿ ಶೇ. 15 ರಿಂದ 20 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
ಇದರಿಂದ ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿದೇಶಿ ಬ್ರ್ಯಾಂಡ್‌ಗಳು ಲಭ್ಯವಾಗಲಿದ್ದು, ದೇಶೀಯ ಪ್ರೀಮಿಯಂ ವಿಸ್ಕಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಇನ್ನಷ್ಟು ಹೆಚ್ಚಾಗಲಿದೆ.
ಆಮದು ಸುಂಕ ಕಡಿಮೆಯಾಗಿದ್ದರೂ, ಮದ್ಯದ ಅಂತಿಮ ಚಿಲ್ಲರೆ ಬೆಲೆಯನ್ನು ನಿರ್ಧರಿಸುವಲ್ಲಿ ಆಯಾ ರಾಜ್ಯ ಸರ್ಕಾರಗಳ ಅಬಕಾರಿ ಸುಂಕ (Excise Duty), ವ್ಯಾಟ್ (VAT), ಸಾಗಣೆ ವೆಚ್ಚ ಮತ್ತು ವಿತರಕರ ಕಮಿಷನ್ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಸುಂಕ ಕಡಿತದ ಪೂರ್ಣ ಪ್ರಯೋಜನವು ಗ್ರಾಹಕರಿಗೆ ತಕ್ಷಣವೇ ಸಿಗದೇ ಇರಬಹುದು ಎಂದು ವಿಶ್ಲೇಷಿಸಲಾಗಿದೆ.


