Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದಿನ ಶಕ್ತಿ ಗುರು : ಗಂಗಾಧರ ದೇವರಮನೆ

Advertisement

ತುರುವೇಕೆರೆ : ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಒಂದು ಶಕ್ತಿ ಮಾರ್ಗದರ್ಶನ ಮಾಡಿರುತ್ತದೆ. ಆ ಶಕ್ತಿಯೇ ಗುರು ಎಂದು ಗ್ಲೋಬಲ್ ಎಂಬಸ್ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಂಗಾಧರ ದೇವರಮನೆ ತಿಳಿಸಿದರು.

ಪಟ್ಟಣದ ಗ್ಲೋಬಲ್ ಎಂಬಸ್ಸಿ ಪ್ರೀಪ್ರೈಮರಿ ಶಾಲೆಯಲ್ಲಿ ಆಯೋಜಿಸಿದ್ದ ಗುರು ಪೌರ್ಣಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರು ಎಂದರೆ ದಿಕ್ಸೂಚಿ, ಮಾರ್ಗದರ್ಶಕ. ಸಾಧನೆಯ ಹಾದಿಯಲ್ಲಿ ಪ್ರತಿಯೊಬ್ಬರ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ಗುರು, ಗುರಿ ಇದ್ದು ಸಾಧಿಸುವ ಛಲವಿದ್ದಾಗ ಮಾತ್ರ ಯಶಸ್ಸಿನ ಶಿಖರವನ್ನೇರಲು ಸಾಧ್ಯ ಎಂದರು.

news_1785568580_0_271.webp

 

ಗುರು ಪೌರ್ಣಮಿಯು ಪವಿತ್ರ ದಿನವಾಗಿದ್ದು, ಮಹರ್ಷಿ ವೇದವ್ಯಾಸರನ್ನು ನೆನಪಿಸಿಕೊಳ್ಳುವ ದಿನವಾಗಿದೆ. ವೇದವ್ಯಾಸರು ಬಹಳ ಶ್ರೇಷ್ಠ ಗುರುಗಳಾಗಿದ್ದು, ಅವರ ಆಧ್ಯಾತ್ಮಿಕ ಚಿಂತನೆ, ದೂರದೃಷ್ಟಿ, ಜ್ಞಾನ, ಸಂಯಮಗಳು ಹಾಗೂ ವೇದವ್ಯಾಸರು ರಚಿಸಿದ ಮಹಾಭಾರತದ ೧೮ ಪುರಾಣಗಳಲ್ಲಿನ ತತ್ವ, ಆದರ್ಶಗಳು ಇಂದಿಗೂ ಆದರ್ಶನೀಯವಾಗಿದೆ ಎಂದರು. 

ಗುರು ಪರಂಪರೆ ಎಂಬುದು ಬಹಳ ದೊಡ್ಡದು. ಇಂದು ನಾವು ಆದರ್ಶನೀಯ ವ್ಯಕ್ತಿಗಳೆಂದು ಗುರುತಿಸುವ ಮಹಾತ್ಮ ಗಾಂಧೀಜಿಯವರು ಗೋಪಾಲಕೃಷ್ಣ ಗೋಖಲೆಯವರನ್ನು, ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು, ಏಕಲವ್ಯರು ದ್ರೋಣಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸಿ ಪೂಜಿಸಿ ಯಶಸ್ಸು ಪಡೆದವರಾಗಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ಅಂದರೆ ಗುರುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿರುವುದು ಗುರುಗಳ ಮಹತ್ವ ಎಷ್ಟೆಂಬುದನ್ನು ಜಗತ್ತಿಗೆ ಸಾರಿದೆ ಎಂದರು. 
news_1785568623_0_637.webp

 

ಶಾಲೆಯ ಪ್ರೀಪ್ರೈಮರಿ ಮಕ್ಕಳು ಮಹರ್ಷಿ ವೇದವ್ಯಾಸರು ಹಾಗೂ ಶಿಷ್ಯವೃಂದದ ವೇಷಭೂಷಣಗಳನ್ನು ತೊಟ್ಟು ಪೌರಾಣಿಕ ಕಾಲದ ಗುರು ಶಿಷ್ಯರ ಪರಂಪರೆ, ಗುರುಕುಲದ ಪಾಠಪ್ರವಚನ ನಡೆಸುವ ರೀತಿಯನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯಿತು. ಸಂಸ್ಥೆಯ ಕಾರ್ಯದರ್ಶಿ ಶರಿತಾ ದೇವರಮನೆ, ಶಿಕ್ಷಕರಾದ ರಾಣಿ, ಹೇಮಾ, ಸುನಿತಾ, ಮಹಾಲಕ್ಷ್ಮಿ, ಮಂಜುಳಾ, ಪ್ರಿಯಾ, ಸೌಮ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದಿನ ಶಕ್ತಿ ಗುರು : ಗಂಗಾಧರ ದೇವರಮನೆಜನಧ್ವನಿಗೆ ಲೇಖನಿಯೇ ಶಕ್ತಿ; ಸಮಾಜದ ಸಮಸ್ಯೆಗಳಿಗೆ ಪತ್ರಕರ್ತರು ಸ್ಪಂದಿಸಬೇಕು : ಪ್ರಕಾಶ ಖಂಡ್ರೆನಿಸ್ವಾರ್ಥ ಸೇವೆ ಸಲ್ಲಿಸಿದರೆ ಶ್ರೇಯಸ್ಸು, ಆಯಸ್ಸು ಹೆಚ್ಚಳ : ಬಿಳಿಗೆರೆ ಶಿವಕುಮಾರ್ಏಳು ಮಕ್ಕಳ ತಾಯಿ ದೇವಸ್ಥಾನದ  ಪುರಾತನ  ಬ್ರದ್ದಾಕಾರದ ಮರವಂದಕ್ಕೆ ಆಕಸ್ಮಿಕ ಬೆಂಕಿಇಂದಿನಿಂದ ಮಧ್ಯವರ್ಜನ ಶಿಬಿರಆಡಳಿತದ ಎಲ್ಲಾ ಸ್ಥಳಗಳಲ್ಲಿ ಕನ್ನಡ ಭಾಷೆ ಅನುಷಾನಗೊಳಿಸಲು ಸರ್ಕಾರ ಬದತೆ ತೋರಲಿಮದ್ಯಪ್ರಿಯರಿಗೆ ಸಂತಸದ ಸುದ್ದಿ : ಸ್ಕಾಚ್, ವಿಸಿ ದರದಲ್ಲಿ ಭಾರೀ ಇಳಿಕೆ ಶಿರಗುಪ್ಪಿ ಪ್ರೌಡಶಾಲೆ ಮುಖ್ಯೋಪಾಧ್ಯಾಯರ ಮೇಲೆ ಕ್ರಮಕೆ ಮನವಿದೇಶದ ಜನತೆಗೆ ದೊಡ್ಡ ರಿಲೀಫ್ : ಇಂದಿನಿಂದ 22 ಔಷಧಗಳ ಹೊಸ ಬೆಲೆ ಜಾರಿಜಾಮೀನು ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್