Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾದರ್ಲಿಗೆ ತಪ್ಪಿದ ಸಚಿವ ಸ್ಥಾನ! ಅಭಿಮಾನಿಗಳಿಂದ ಆತ್ಮಹತ್ಯೆಗೆ ಯತ್ನ!

Advertisement

ಸಿಂಧನೂರು : ಸರಳ ಸಜ್ಜನಿಕೆಯ ಜನ ನಾಯಕ ಹಂಪನಗೌಡ ಬಾದರ್ಲಿ ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದು ಜನರ ವಿಶ್ವಾಸ ಗಳಿಸಿ 5 ಬಾರಿ ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಗೆಲವು ಸಾಧಿಸಿ ವಿಧಾನಸಭೆಯಲ್ಲಿ ತಮ್ಮದೇ ಆದ ವರ್ಚಸ್ಸು ಮೂಡಿಸುವ ಮೂಲಕ  ರಾಜಕೀಯ ಪ್ರಭಾವ ಮತ್ತು ಜನಬಲ ದಿಂದ  ಈ ಸಾರಿ ನನಗೆ ಸಚಿವ ಸ್ಥಾನ ಫಿಕ್ಸ್ ಎಂದು ಹೇಳಿಕೊಳ್ಳುತ್ತಿದ್ದ ಶಾಸಕ ಹಂಪನಗೌಡ ಬಾದರ್ಲಿಗೆ ಕೊನೆಗೆ ಸಚಿವ ಸ್ಥಾನ ಕನಸು ನನಸಾಗಿ ಹೋಯಿತು
 ಈ ಸುದ್ದಿ ಹೊರ ಬಿದ್ದ  ಹಿನ್ನೆಲೆ ಬೆಂಗಳೂರು ವಿಧಾನಸೌಧದ ಮುಂದೆ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ  ಕಾರ್ಯಕರ್ತರು ಹಾಗೂ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಮೈ ಮೇಲೆ ಪೆಟ್ರೋಲ್ ಸುರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಹಂಪನಗೌಡ ಬಾದರ್ಲಿ ಅವರು ಸತತ ಎರಡು ತಿಂಗಳಿಂದಲೇ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಸಂಪರ್ಕದಲ್ಲಿದ್ದು ಇನ್ನೇನು ಗೌಡರಿಗೆ ಸಚಿವ ಸ್ಥಾನ ಪಿಕ್ಸ್ ಎನ್ನುವ ಮಾತು ದಿನೇ ದಿನೇ ದಿನಪತ್ರಿಕೆ ಮತ್ತು ವಾಟ್ಸಪ್ ಫೇಸ್ಬುಕ್ ಗಳಲ್ಲಿ ಹರಿದಾಡುತ್ತಿದ್ದು ಸಚಿವ ಸಂಪುಟ ವಿಸ್ತೀರ್ಣೀಯ ಪ್ರತಿ ಸಂದರ್ಭದಲ್ಲಿ ಶಾಸಕ ಬಾದರ್ಲಿ ಅವರ ಹೆಸರು ಕೇಳಿ ಬರುತ್ತಿತ್ತು ಅಂತಿಮ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗಲೆಯಿಲ್ಲ, ರಾಜಕೀಯ ಅನುಭವ ಪಕ್ಷ ನಿಷ್ಠೆ ಮತ್ತು ಜನಬೆಂಬಲ ಇದ್ದರೂ ಕೂಡ ರಾಜಕೀಯ ಲೆಕ್ಕಾಚಾರ ಮತ್ತು ಪಕ್ಷದ ಆಂತರಿಕ ತಂತ್ರಗಾರಿಕೆಗಳು ಬಾದರ್ಲಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಬಲ್ಲ ಮೂಲಗಳಿಂದ ಕೇಳಿ ಬಂದಿದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಕೈ ನಾಯಕರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಹೈಕಮಾಂಡ್ ಮತ್ತು ರಾಜ್ಯ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಮ್ಮ ನಾಯಕರನ್ನು ಕಡೆಗಣಿಸಿ ಅವರ ಆತ್ಮಭಿಮಾನಕ್ಕೆ ಅನ್ಯಾಯ ಮಾಡಿದ ವರಿಷ್ಠರಿಗೆ  ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಎಲ್ಲಾ ಬೆಳವಣಿಗೆ ಕಂಡು ಸಿಎಂ, ಡಿಕೆಶಿ ಮನವಿ ಮಾಡಿ ತಾಳ್ಮೆಯಿಂದ ಇರಿ ಒಂದಲ್ಲ ಒಂದು ಅವಕಾಶ ಕಲ್ಪಿಸುತ್ತಿವೆ , ಸಚಿವ ಸ್ಥಾನ ವಂಚಿತರಿಗೆ ಸಿಎಂ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

 

ವರದಿ : ಬಸವರಾಜ ಬುಕ್ಕನಹಟ್ಟಿ, 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕ PM ಅಶೋಕ್ ಅವರಿಗೆ ಸೋಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಬಾದರ್ಲಿಗೆ ತಪ್ಪಿದ ಸಚಿವ ಸ್ಥಾನ! ಅಭಿಮಾನಿಗಳಿಂದ ಆತ್ಮಹತ್ಯೆಗೆ ಯತ್ನ!ಹೆಬ್ಬಾಳಕರ್ ಸಚಿವ ಸ್ಥಾನಕ್ಕಾಗಿ ಬಿಗಿಪಟ್ಟು : ಬೆಂಬಲಿಗರ ಬೃಹತ್ ಪ್ರತಿಭಟನೆ ಮೊಬೈಲ್ ಕೊಡಿಸದಕ್ಕೆ ಮನನೊಂದು 13 ವರ್ಷದ ಬಾಲಕ ಆತ್ಮಹತ್ಯೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಿರುವ ಸರಳತೆಯ ಶಾಸಕನಿಗೆ ಒಲಿದ ಸಚಿವ ಸ್ಥಾನ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಮರುಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಪೊಲೀಸ್ ಪರೀಕ್ಷೆ ಬರೆದು ಬರುವಾಗ ದುರಂತ : ಟ್ರ್ಯಾಕ್ಟರ್ ಡಿಕ್ಕಿಯಾಗಿ ಯುವಕ ಸಾವು 5.50 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಸಿ ವಿಜಯಾನಂದ ಕಾಶಪ್ಪನವರ ಮೊದಲ ಬಾರಿಗೆ ಸಚಿವ ಸ್ಥಾನಕೈತಪ್ಪಿದ ಮಂತ್ರಿ ಸ್ಥಾನ : ಹೆಬ್ಬಾಳ್ಕರ್ ಬೆಂಬಲಿಗರಿಂದ ರಸ್ತೆ ತಡೆದು ಪ್ರತಿಭಟನೆ