ಮಲ್ಲಮ್ಮನ ಬೆಳವಡಿ : ವಿಶ್ವದಲ್ಲಿ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರ ಕನ್ನಡತಿಯ ವರ್ಧಂತಿ ಉತ್ಸವ ವಿಶ್ವದಲ್ಲಿ ಪ್ರಪ್ರಥಮ ಮಹಿಳಾ ಸೈನಿಕ ಕಟ್ಟಿದ ಹಾಗೂ ಬ್ರಿಟಿಷರು ವ್ಯಾಪಾರಕ್ಕೆ ವಿರೋಧ ಮಾಡಿದ ಭಾರತದ ಪ್ರಥಮ ಮಹಿಳೆ ವೀರರಾಣಿ ಬೆಳವಡಿ ಮಲ್ಲಮ್ಮಳ ವರ್ಧಂತಿ ಉತ್ಸವವು ಅದ್ದೂರಿಯಾಗಿ ಜರುಗಿತು. ರಾಣಿ ಬೆಳವಡಿ ಮಲ್ಲಮ್ಮಳ ರಾಜ ಗುರುಗಳಾದ ಸವದತ್ತಿ ತಾಲೂಕಿನ ಹುಲಿಯ ಹಿರೇಮಠದಿಂದ ಗುರು ಜ್ಯೋತಿಯು ಹಿರೇಮಠದ ಪೂಜ್ಯ ಶ್ರೀ ಅಜ್ಜಯ್ಯ ಶಾಸ್ತ್ರಿಗಳಿಂದ ಪೂಜೆ ಮಾಡುವುದರೊಂದಿಗೆ ಜ್ಯೋತಿ ಯಾತ್ರೆಗೆ ಚಾಲನೆಯನ್ನು ನೀಡಲಾಯಿತು ಸೌದತ್ತಿ ಕರಿಕಟ್ಟಿ ದೊಡ್ಡವಾಡ ಗ್ರಾಮದಲ್ಲಿ ಗ್ರಾಮದ ಹಿರಿಯರು ಹಾಗೂ ಶಾಲಾ ಮಕ್ಕಳಿಂದ ಜ್ಯೋತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು ನಂತರ ಮುಂಜಾನೆ 11:30ಕ್ಕೆ ಮಲ್ಲಮ್ಮನ ಬೆಳವಡಿ ಗ್ರಾಮಕ್ಕೆ ಆಗಮಿಸಿದ ಜ್ಯೋತಿಯನ್ನು ಬೆಳವಡಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಅದ್ದೂರಿಯಾಗಿ ಬರಮಾಡಿಕೊಂಡರು ರಾಣಿ ಮಲ್ಲಮ್ಮನ ವರ್ಧಂತಿ ಉತ್ಸವದ ಅಂಗವಾಗಿ ಗ್ರಾಮದ ಯುವಕರ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿ ಐ ಪಾಟೀಲ್ ಗ್ರಾಮ ಪಂಚಾಯಿತಿ ಗ್ರಾಮದ ಹಿರಿಯರಾದ ಚಂದ್ರಶೇಖರ್ ಬ ಕಾರಿಮನಿ ವೀರಣ್ಣ ಕರಿಕಟ್ಟಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಅ ಹುಂಬಿ ಬಿ ಜಿ ದೇಗಾವಿ ರಾಚಯ್ಯ ಸ್ವಾಮಿಗಳು ರೊಟ್ಟೆನವರ ಮಠ ರಾಜಪ್ಪ ಮಟ್ಟಿ ಎಂ ಎಂ ಕಾಡೇಶನವರ ಜೈನುಲಸಾಬ ಹುಜರತ್ತಿ ವಿಠಲ ಫಿಶ್ ಪ್ರಕಾಶ್ ಕಾರಿಮನಿ ಎಲ್ಲಪ್ಪ ಸಿದ್ದಣ್ಣವರ ಪಿಂಟು ಗುಡ್ಡದಮಠ ರಂಜಾನ್ ನದಾಫ್ ಸಿದ್ದಪ್ಪ ಸಿದ್ದಣ್ಣವರ ಎಸ್ಎಂ ಕರಿಕಟ್ಟಿ ಎಂಪಿ ಉಪ್ಪಿನ ಅಯ್ಯನಗೌಡ ಪಾಟೀಲ್ ಈರಣ್ಣ ತುರಾಯಿ ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಪಾಟೀಲ್ ಸುಭಾಷ್ ಚಿಕ್ಕನಗೌಡ್ರು ಸಚಿನ್ ಹುಂಬಿ ಶಿವಾನಂದ ಶಂಬೂಜಿ ಫಕ್ಕೀರ್ ಉಳಿಗೆರಿ ಮಹೇಶ್ ರೇವಯ್ಯನವರು ಉಪಸ್ಥಿತರಿದ್ದರು ಕಿತ್ತೂರು ಕರ್ನಾಟಕ ಸೇನೆಯ ಯುವಕರು ಜ್ಯೋತಿಯಾತ್ರೆಯ ನೇತೃತ್ವ ವಹಿಸಿದ್ದರು . ರಾಣಿ ಮಲ್ಲಮ್ಮ ಪ್ರತಿಷ್ಠಾನದ ಮಹಿಳೆಯರು ಗ್ರಾಮದ ವಿವಿಧ ಸಂಘಟನೆಗಳ ಹಿರಿಯರು ಹಾಗೂ ಈಶಪ್ರಭು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಆದರ್ಶ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಗುರುಗುಂದ ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು.
ವರದಿ : ದುಂಡಪ್ಪ ಹೂಲಿ


