ಹೌದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸಿಕಂದರ್ ನಟಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬ್ಲ್ಯೂ ಫ್ರಾಕ್ ಧರಿಸಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಕಿರಿಕ್ ಪಾರ್ಟಿ ಬೆಡಗಿ. ಕಡಲ ತೀರದಲ್ಲಿ ಬರ್ತ್ಡೇ ಸೆಲೆಬ್ರೇಶನ್ ಅರೇಂಜ್ಮೆಂಟ್ ಒಂದು ಸಣ್ಣ ಲುಕ್ ಈ ವಿಡಿಯೋದಲ್ಲಿ ಸಿಕ್ಕಿದೆ. ಫ್ಲವರ್ಸ್, ಲೈಂಟಿಂಗ್ಸ್ ಕಡಲ ತೀರವನ್ನು ಮತ್ತಷ್ಟು ಚೆಂದಗೊಳಿಸಿದೆ. ನಟಿ, 'ಹ್ಯಾಪಿ ಬರ್ತ್ಡೇ ಟು ರಶಿ' ಎಂದು ಮಗುವಿನಂತೆ ವರ್ತಿಸಿದ್ದಾರೆ. ಡ್ಯಾನ್ಸ್ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಕ್ಯೂಟ್ ಎಂದು ಗುಣಗಾನ ಮಾಡುತ್ತಿದ್ದಾರೆ.


