
ಅಪಘಾತ ಹೇಗೆ ನಡೆಯಿತು ?
ಕಾರಟಗಿ ಮಾರ್ಗವಾಗಿ ಗಂಗಾವತಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ (ಕೆಎ ೩೬.ಎಫ್ ೧೪೪೯) ಶನಿವಾರ ಮಧ್ಯಾಹ್ನ ೧೨: ೪೫ ಘಂಟೆ ಸುಮಾರಿಗೆ ಕಾರಟಗಿ ಸರಹದ್ದು ವ್ಯಾಪ್ತಿಗೊಳಪಡುವ ಮರ್ಲಾನಹಳ್ಳಿಯ ಪೆಟ್ರೋಲ್ ಬಂಕ್ ಪಶ್ಚಿಮ ದಿಕ್ಕಿಗೆ ಇರುವ ರಾಜ್ಯ ರಸ್ತೆಯ ಮೇಲೆ ಬಸ್ಸು ಚಲಿಸುತ್ತಿರುವ ಸಂದರ್ಭದಲ್ಲಿ ಮುಂದೆ ಹೋಗುತ್ತಿರುವ ಕಾರನ್ನು ಓವರ್ ಟೇಕ್ ಮಾಡಲು ಬಸ್ ಚಾಲಕ ಪ್ರಯತ್ನಿಸಿದ್ದಾನೆ ಓವರ್ಟೇಕ್ ಮಾಡಿದ ಸಂದರ್ಭದಲ್ಲಿ ಮರ್ಲಾ ನಹಳ್ಳಿಯಿಂದ ಕಾರಟಗಿಗೆ ಕೆಲಸದ ನಿಮಿತ್ಯ ಬರುತ್ತಿರುವ ದ್ವಿಚಕ್ರವಾಹನಕ್ಕೆ (ಗಾಡಿ ನಂಬರ್ ಕೆಎ ೩೭, ಇಪಿ ೪೪೯೪ ) ಬಸ್ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ದಾರಿಹೋಕರು ಘಟನೆಯ ಬಗ್ಗೆ ಮಾತನಾಡಿಕೊಂಡರು ಬಸ್ ಚಾಲಕನ ಅಚಾತುರ್ಯದಿಂದ ಅಪಘಾತ ಸಂಭವಿಸಲಾಗಿದೆ ಎಂದು ಹೇಳಲಾಗುತ್ತಿದೆ
ಇತ್ತೀಚಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕರು ನಗರದಲ್ಲಿ ಮತ್ತು ನಗರದ ಹೊರ ವಲಯದ ರಸ್ತೆಗಳ ಮೇಲೆಯೂ ಬಸ್ ಓವರ್ ಸ್ಪೀಡ್ ಮಾಡುವುದರ ಮೂಲಕ ಕರ್ತವ್ಯದಲ್ಲಿ ಅಚಾತುರ್ಯ ತೋರುತ್ತಿದ್ದಾರೆ ಬಸ್ ಚಾಲಕರ ಅಚಾತುರ್ಯದಿಂದಾಗಿ ಅಪಘಾತಗಳು ಪ್ರಕರಣಗಳು ಹೆಚ್ಚುತ್ತಿದ್ದು ಮರ್ಲಾನಹಳ್ಳಿಯ ಅಪಘಾತಕ್ಕೆ ಬಸ್ ಚಾಲಕನ ಅಚಾತುರ್ಯ ಕಾರಣ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಹಾಗೂ ಗಾಯಾಳುಗೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು
ಶರಣಪ್ಪ ಸಂಗಟಿ

