Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೇಳೂರು ತಾಲೂಕು ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ.

Advertisement
ಚೇಳೂರು : ತಾಲ್ಲೂಕಿನ ಕೇಂದ್ರವಾಗಿ ಬೆಳೆಯುತ್ತಿರುವ ಚೇಳೂರು ಪಟ್ಟಣದಲ್ಲಿ ಅಪರಾಧ ಪ್ರಕರಣ ಹಾಗೂ ಕಳ್ಳತನಕ್ಕೆ ಕಡಿವಾಣ ಹಾಕಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸ್ಥಳೀಯರ ಮನವಿಯಾಗಿದೆ.

ಪಟ್ಟಣದ ಪ್ರಮುಖ ಎಂ ಜಿ ವೃತ್ತ ಹಾಗೂ ಚಿಂತಾಮಣಿ ಹಾಗೂ ಬಾಗೇಪಲ್ಲಿ ಬಸ್ ನಿಲ್ದಾಣ,ಕಂದುಕೂರು ರಸ್ತೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಪಟ್ಟಣದಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗುತ್ತಿದೆ.ಆಂಧ್ರದ ಕಂದುಕೂರು, ಟಿ,ಸದುಮ್ ,ಪಾತಪಾಳ್ಯ,ಬುರುಡಗುಂಟೆ,ಬಾಗೇಪಲ್ಲಿ,ಚಿಂತಾಮಣಿ,ಚಾಕವೇಲು ಇನ್ನೂ ಮುಂತಾದ ಕಡೆಗಳಿಂದ ಪ್ರತಿನಿತ್ಯ ಹತ್ತಾರು ಬಸ್‌ಗಳು, ವಾಹನಗಳು ಸಂಚರಿಸುತ್ತವೆ. ನೂರಾರು ಜನರು ಬಂದು ಇಲ್ಲಿ ವ್ಯವಹರಿಸುತ್ತಾರೆ.

ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು ಬೇರೆ ಬೇರೆ ತಾಲೂಕುಗಳಿಂದಲೂ ಬಹಳಷ್ಟು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಆದ್ದರಿಂದ ಅವರ ಚಲನವಲನಗಳ ಕುರಿತು ಗಮನಹರಿಸುವುದರ ಜೊತೆಗೆ ಕಳ್ಳತನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರ ಮೇಲೆ ನಿಗಾವಹಿಸಲು ಕ್ಯಾಮೆರಾ ಅನುಕೂಲವಾಗಲಿದೆ ಎಂಬುದು ಚೇಳೂರು ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಕಡ್ಡಿಲ್ ವೆಂಕಟರಮಣ ಅವರ ಅಭಿಪ್ರಾಯ.



ಇತ್ತೀಚಿಗೆ ಬಿಎಸ್ಎನ್ಎಲ್ ಟವರ್ ನ ಬಲಿ ಕೇಬಲ್ ಕಳ್ಳತನವಾಗಿದ್ದು ಇದುವರೆಗೂ ಯಾವುದೇ ಕುರುಹುಗಳು ಸಿಕ್ಕಿರುವುದಿಲ್ಲ,ಹಾಗೂ ಪಟ್ಟಣದಲ್ಲಿ ಸುಮಾರು ಮಧ್ಯದ ಅಂಗಡಿಗಳನ್ನು ಹೊಂದಿದ್ದು ಕುಡುಕರ ಹಾವಳಿ ಕೂಡ ಜಾಸ್ತಿ ಇರುತ್ತದೆ,

ಇದರಿಂದ ಕುಡಿತದ ಮಧ್ಯದಲ್ಲಿ ಕಳ್ಳತನ ಗಲಾಟೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ್ಯರಸ್ತೆಯ ಆಯಕಟ್ಟಿನ ಜಾಗಗಳಲ್ಲಿ ಎಚ್‌.ಡಿ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಟೈಲರ್ ರಾಮಚಂದ್ರ.

ವಿವಿಧ ಕೆಲಸಗಳ ನಿಮಿತ್ತ ಹೊರಗೆ ಹೋಗಿರುವವರು, ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಕೆಲಸಕ್ಕೆ ಹೋಗುವವರು ತಡವಾಗಿ ಇಲ್ಲಿಗೆ ಬರುತ್ತಾರೆ. ಈ ವೇಳೆ ಜನರ ಓಡಾಟ ವಿರಳವಾಗಿರುವುದರಿಂದ, ಸಾರ್ವಜನಿಕರು ಭಯದ ವಾತಾವರಣದಲ್ಲಿ ಮನೆಗಳಿಗೆ ಹೋಗಬೇಕಾದಂತಹ ಸ್ಥಿತಿಯಿದೆ.

ಮುಖ್ಯರಸ್ತೆ ಬದಿಗಳಲ್ಲಿ ತ್ಯಾಜ್ಯ ಸುರಿಯುವವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ ಸಹಕಾರಿಯಾಗಲಿದೆ ಎನ್ನುತ್ತಾರೆ ಇಲ್ಲಿನನಾಗರಿಕರು.
ತಾಲೂಕು ಕೇಂದ್ರವಾದ ಮೇಲೆ ಚೇಳೂರು ಗ್ರಾಮ ಪಂಚಾಯತಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಅಪರಾಧ ಪ್ರಕರಣಗಳು, ಕಳವು ಮುಂತಾದ ಅಕ್ರಮ ಚಟುವಟಿಕೆಗಳು ಹೆಚ್ಚಾಗುವ ಸಾದ್ಯತೆ ಹೆಚ್ಚು ಇದೆ. ಇಂಥ ಪ್ರಕರಣಗಳ ತಡೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಅಧಿಕಾರಿಗಳು ಮುಂದಾಗಬೇಕು.
- ಜೆ ಎನ್ ಜಾಲಾರಿ.ಕಾಂಗ್ರೇಸ್ ಮುಖಂಡರು ಚೇಳೂರು.

ಚೇಳೂರು ನೂತನ ತಾಲೂಕಾಗಿದ್ದು ಇಲ್ಲಿನ ಜನಸಂಖ್ಯೆಗೆ ಅನುಗುನವಾಗಿ ಹೆಚ್ಚಿನ ಅನುದಾನವು ಬೇಕಾಗಿದೆ,ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಯಾದರೆ ಅನುದಾನವು ಹೆಚ್ಚಾಗಲಿದ್ದು ಪಟ್ಟಣಕ್ಕೆ ಬೆಕಾಗುವ ಗ್ತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು.- ಕೆ ವೆಂಕಟಾಚಲಪತಿ ಪಿಡಿಒ ಚೇಳೂರು ಗ್ರಾಂ.ಪ.

ವರದಿ :ಯಾರಬ್. ಎಂ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ