Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಮಲ್ಲಮ್ಮನ ಬೆಳವಡಿ ಬೂದಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Advertisement
ಮಲ್ಲಮ್ಮನ ಬೆಳವಡಿ: 2025-26 ನೇ ಸಾಲಿನ ಬೆಳವಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ 4*400 ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದೆ ಹಾಗೂ ಬಾಲಕಿಯರ 4*100 ರಿಲೇ ದ್ವಿತೀಯ ಸ್ಥಾನ, ಬಾಲಕರ ಖೋ ಖೋ ದ್ವಿತೀಯ ಸ್ಥಾನ ಪಡೆದು ಬಾಲಕರ ಸಮಗ್ರ ವೀರಾಗ್ರಣಿ ಶಾಲೆ ಪ್ರಶಸ್ತಿಯನ್ನು ಬಾಚಿಕೊಂಡಿದೆ.

17 ವರ್ಷದ ಬಾಲಕರ ವಿಭಾಗದಲ್ಲಿ ಕಲ್ಮೇಶ ಗುಡ್ಡದ 400 ಮೀ ಓಟ, 3000 ಮೀ ಓಟ, ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ ಮುತ್ತುರಾಜ ಜೋಗಿಗುಡ್ಡ 800 ಮಿ ಓಟ, 1500 ಮೀ ಓಟ, 110 ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬಾಲಕರ ವೈಯಕ್ತಿಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಈಶ್ವರ ಅಂಗಡಿ ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 800 ಮೀ ಓಟದಲ್ಲಿ ದ್ವಿತೀಯ, ಸುದರ್ಶನ ಸೊಗಲದ 3000 ಮೀ ಓಟದಲ್ಲಿ ದ್ವಿತೀಯ, 110 ಮೀ ಅಡೆತಡೆ ಓಟದಲ್ಲಿ ದ್ವಿತೀಯ, ಬಸವರಾಜ ಯರಗೊಪ್ಪ 5 ಕಿ ಮೀ ನಡಿಗೆಯಲ್ಲಿ ತೃತೀಯ, ಹರೀಶ ಗರಗದ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಲಕ್ಷ್ಮೀ ಶಿಗೀಹಳ್ಳಿ 1500 ಮೀ ಓಟದಲ್ಲಿ ಪ್ರಥಮ ಹಾಗೂ 100 ಮೀ ಅಡೆತಡೆ ಓಟದಲ್ಲಿ ಪ್ರಥಮ, ಸೀಮಾ ಹೊಸೂರ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾವೇರಿ ಜಡಗನ್ನವರ 3000 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ.

14 ವರ್ಷದ ಬಾಲಕರ ವಿಭಾಗದಲ್ಲಿ ಬಸವರಾಜ ಕುರಿ 200 ಮೀ ಓಟ, 600 ಮೀ ಓಟದಲ್ಲಿ ಪ್ರಥಮ, ಸಂತೋಷ ಬೋಬಡೆ 400 ಮೀ ಓಟದಲ್ಲಿ ಪ್ರಥಮ ಹಾಗೂ 80 ಮೀ ಅಡೆತಡೆ ಓಟದಲ್ಲಿ ಪ್ರಥಮ, ಭಾಸ್ಕರ ಹುದ್ದಾರ 100 ಮೀ ಓಟದಲ್ಲಿ ಪ್ರಥಮ ಹಾಗು 4*100 ಮೀ ರಿಲೇ ಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 14 ವರ್ಷದ ಬಾಲಕಿಯರ ವಿಭಾಗದಲ್ಲಿ ಅಪೂರ್ವಾ ಕುಲಕರ್ಣಿ 100 ಮೀ ಓಟದಲ್ಲಿ ಪ್ರಥಮ, ಪಂಕಜಾ ಸೂರ್ಯವಂಶಿ 80 ಮೀ ಅಡೆತಡೆ ಓಟದಲ್ಲಿ ಪ್ರಥಮ, ಸವಿತಾ ಕುರಿ 400 ಮೀ ಓಟದಲ್ಲಿ ದ್ವಿತೀಯ, ಬಸಮ್ಮ ಕಂಬಳಿ 600 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಮುಖ್ಯ ಶಿಕ್ಷಕರಾದ ಶ್ರೀ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಶ್ರೀ ಜೆ.ಆರ್.ನರಿ, ಎಸ್.ವಿ.ಬಳಿಗಾರ, ಎಚ್.ವಿ.ಪುರಾಣಿಕ, ಎಮ್.ಎನ್.ಕಾಳೆ, ವೀರೇಂದ್ರ ಪಾಟೀಲ, ಸಂತೋಷ ಸಾಳುಂಕೆ, ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.

ವರದಿ: ದುಂಡಪ್ಪ ಹೂಲಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ