Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಜೃಂಭಣೆಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ

Advertisement
ನಿಪ್ಪಾಣಿ : ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ ಅವರ ಸೇನೆಯಲ್ಲಿ 60ಸಾವಿರ ಮುಸ್ಲಿಂ ಸೈನ್ಯಗಳಿದ್ದರು. 12 ಜಾತಿಗಳನ್ನು ಸೇರಿಸಿ ಸ್ವರಾಜ್ಯ ನಿರ್ಮಿಸಿ ಇತಿಹಾಸ ಸೃಷ್ಟಿಸಲಾಗಿದೆ. ಇಂದಿನ ಯುವಕರು ಇತಿಹಾಸ ಓದಬೇಕು. ದೇಶದಲ್ಲೇ ಪ್ರಥಮ ಬಾರಿಗೆ ಮೀಸಲಾತಿ ನೀಡಿದ ಶಾಹು ಮಹಾರಾಜರು. ಸಯಾಜಿರಾವ್ ಗಾಯಕವಾಡ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಿದ್ದಾರೆ. ಅವರು ಸಂವಿಧಾನವನ್ನು ಬರೆದರು, ಇಂದು ಅದೇ ಮರಾಠಾ ಸಮುದಾಯವು ಮೀಸಲಾತಿಗಾಗಿ ಬೀದಿಗೆ ಬರಬೇಕಾಗಿದೆ. ಮೀಸಲಾತಿಯ ಅವಶ್ಯಕತೆ ಇದೆ ಆದರೆ ಮೀಸಲಾತಿ ಘೋಷಣೆಯಾಗುತ್ತಿಲ್ಲ. ಮರಾಠಾ ಸಮಾಜ ಬಾಂಧವರುತಮ್ಮ ಮಕ್ಕಳನ್ನು ಜಗಳಕ್ಕೆ ಕಳುಹಿಸುವ ಬದಲು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು.ಇದೇ ವೇಳೆ ಮರಾಠಾ ಸಮಾಜದ ಪ್ರಮುಖರಾದ ಬಾಳಾಸಾಹೇಬ ಪಾಟೀಲ್ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಶಿವರಾಯರ ಪ್ರತಿಮೆಗೆ 25 ಲಕ್ಷ ರೂಪಾಯಿ ನೀಡಿ ಅವರ ಕನಸನ್ನು ನನಸು ಮಾಡಿದ್ದಾರೆ. ಅವರಿಗೆ ಸಮುದಾಯ ವತಿಯಿಂದ ಧನ್ಯವಾದ ಹೇಳಿ ಪ್ರಕಾಶ ಹುಕ್ಕೇರಿ ಹಿರಿಯ ನಾಯಕರಾಗಿದ್ದು, 75ರ ಹರೆಯದಲ್ಲೂ ತಮಗೆ ಯುವಕರಂತೆ ಕೆಲಸ ಮಾಡುತ್ತಿದ್ದಾರೆ.

ಎಂದರು ವಿಧಾನ ಪರಿಷತ್ ಪ್ರಕಾಶ ಹುಕ್ಕೇರಿ ಮಾತನಾಡಿ. ಈ ಪ್ರತಿಮೆಯನ್ನು ಸ್ಥಾಪಿಸಿದ ಕೀರ್ತಿ ಗಣೇಶ ಹುಕ್ಕೇರಿ ಅವರಿಗೆ ಸಲ್ಲುತ್ತದೆ. ಕೇಂದ್ರೀಯ ವಿದ್ಯಾಲಯ ಡಿಪ್ಲೊಮಾ ಕಾಲೇಜು ಬಸ್ ನಿಲ್ದಾಣ ಸೇರಿದಂತೆ ನಗರದಲ್ಲಿ ಸದಲಗಾಯವನ್ನು ಪರಿವರ್ತಿಸಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಿದ್ದೇನೆ.ಬರುವ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಹಾಗೂ ಸದಲಗಾ ತಾಲೂಕಾಗಬೇಕು ಎಂದು ಮುಖ್ಯಮಂತ್ರಿ ಹಾಗೂ ಸಚಿವ ಲಾಡ ಅವರಿಗೆ ಆಗ್ರಹಿಸಿದರು.

ಸದಲಗಾದಲ್ಲಿ ಸಮಾಜ ಬಾಂಧವರ ಬೇಡಿಕೆಯಂತೆ ಮರಾಠಾ ಭವನಕ್ಕೆ ಎರಡು ಕೋಟಿ ರೂ.ನೀಡಲಿದ್ದು, ಇದಕ್ಕೆ ನಗರಸಭೆ ಜಾಗ ನೀಡಬೇಕು. ನನಗೆ ಉಡುಗೊರೆಯಾಗಿ ನೀಡಿರುವ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮರಾಠ ಸಮಾಜ ಭವನದ ಉದ್ಘಾಟನಾ ಸಮಾರಂಭದಲ್ಲಿ ನೀಡಬೇಕು ಎಂದರು.
ಡಾ.ಪ್ರಕಾಶ ಕದಂ ಪ್ರಾಸ್ತಾವಿಕ ಭಾಷಣ ಮಾಡಿದರು.ಇದೇ ವೇಳೆಗೆ ಸುಪ್ರಿಯಾ ದೇಸಾಯಿ ಮತ್ತಿತರರು ಮಾತನಾಡಿ 1987 ರಲ್ಲಿ ಪೂರಸಭೆಯಲಿ ಠರಾವನ್ನು ಹಾಕಿ ಶಿವಾಜಿ ಪ್ರತಿಮೆಯನ್ನು ನಿರ್ಮಾಣಕ್ಕಾ ನಿವೇಶನ ಆಯ್ಕೆ ಮಾಡಿ ಅನಂತರ ಚಭೂತರ ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವೀರಕುಮಾರ ಪಾಟಿಲ, ಉತ್ತಮ್ ಪಾಟೀಲ್, ರಾಹುಲ್ ಜಾರಕಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅದ್ವಿಕ್ ಹುಕ್ಕೇರಿ, ಬಾಳಾಸಾಹೇಬ್ ಪಾಟೀಲ್, ನಂದರಾಜ್ ನಿಂಬಾಳ್ಕರ್, ಸುಮಿತ್ರಾ ಉಗ್ಲೆ, ಸುಪ್ರಿಯಾ ಪಾಟೀಲ್, ಮೋಹನ್ ಶಿಟೋಳೆ, ಗಜಭಾವು ಪಾಟೀಲ್, ಅನಿರುದ್ಧ ಪಾಟೀಲ್, ಪ್ರದೀಪ್ ಜಾಧವ್, ಅನಿಲ್ ಮಾನೆ, ಪಾಂಡುರಂಗ ಯಡ್ಕರೇಸ್, ಹೆಚ್.ಡಿ ಎನ್ ಬೇಪಾರಿ, ಬಸವರಾಜ್ ಗುಂಡಕಲ್ಲೇ ಸಂತೋಷ ನವಲೆ, ಮರಾಠ ಸಮಾಜದ ಅಧ್ಯಕ್ಷ ಅನೀಲ ಮಾನೆ ಉಪಾಧ್ಯಕ್ಷ ಜೈದೀಪ ಮಹೇಕರ, ಸಂತೋಷ ಹವಾಲ್ದಾರ್, ಪರಶುರಾಮ ಸಾಳುಂಖೆ, ಅನಿರುದ್ಧ ಪಾಟೀಲ ಸೇರಿ ಅಪಾರ ಸಂಖ್ಯೆಯಲ್ಲಿ ನಾಗರಿಕರು ಉಪಸ್ಥಿತರಿದ್ದರು.ಸಂತೋಷ್ ಹೂಗಾರ ಶಿವಾಜಿ ಮಹಾರಾಜರ ಪೋವಾಡ ಹಾಡಿ ಜನರನ್ನು ಹುರಿದುಂಬಿಸಿದರು.

ವರದಿ : ಮಹಾವೀರ ಚಿಂಚಣೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ