
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಡೊಣ್ಣೂರ್, ಅಂಗನವಾಡಿ ಮೇಲ್ವಿಚಾರಕಿಯರಾದ ಶೀಲಾದೇವಿ, ಗೀತಾ ಯಡ್ರಾಮಿ, ಸುನಿತಾ, ಕವಿತಾ, ಅಜೀಂ ಪ್ರೇಮಜಿ ಫೌಂಡೇಶನ್‌ನ ಜ್ಯೋತಿಕಾ, ಅನನ್ಯ, ರೇಣುಕಾ, ದೇವಮ್ಮ, ಅನ್ನದಾನಿ, ಅಕ್ಕಮಹಾದೇವಿ, ರುಬಿನ, ನಾಗವೇಣಿ, ಕೊರವಾರ ವಲಯದ ಕಾರ್ಯಕರ್ತರು ಹಾಗೂ ಕಾಳಗಿ ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು.
ಪುಟ್ಟ ಮಕ್ಕಳ ಉತ್ಸಾಹ, ನಗು ಮತ್ತು ಪ್ರತಿಭೆಯಿಂದ ಕಾರ್ಯಕ್ರಮದ ಸೊಬಗು ಹೆಚ್ಚಿತು. ಬಾಲಮೇಳದ ಉದ್ದೇಶವಾದ ಮಕ್ಕಳ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸುವ ಕೆಲಸ ಯಶಸ್ವಿಯಾಗಿ ನೆರವೇರಿತು. ಡೊಣ್ಣೂರ್ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪಾರ್ವತಿ ಕೆ. ಡೊಣ್ಣೂರ್ ನಿರೂಪಿಸಿದರು.
ವರದಿ: ಹಣಮಂತ ಕುಡಹಳ್ಳಿ

