
ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ, ಸದಸ್ಯರಾದ ರಾಮಣ್ಣ ಹಣಸಿ, ಕುಮಾರ ವಡ್ಡರ, ರವಿ ಭಜಂತ್ರಿ, ಉಮೇಶ ಭಜಂತ್ರಿ, ಕಾಶಪ್ಪ ಕರಡಿಗುಡ್ಡ, ಎನ್ ಜಿ ಓ ಅಧ್ಯಕ್ಷರು ವಾಸು ಮುಗಳಿ, ಬಿ ಆಯ್ ಇ ಆರ್ ಟಿ ಅಧಿಕಾರಿ ಆರ್ ಎಸ್ ಸಂಕನ್ನವರ, ಬಿ ಆರ್ ಪಿ ಗಳಾದ ಕೆ ವಾಯ್ ಪಾಟೀಲ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಿ ಆರ್ ಪಿ, ಆರ್ ಪಿ ಬೆಟಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯೆ ಜ್ಞಾನ ಹೊಂದಿರದ ಮಕ್ಕಳಿಗೆ ಆಗಷ್ಟ್ 2024 ರಿಂದ ಇಲ್ಲಿಯವರೆಗೆ ಪ್ರತ್ಯೇಕ ತರಗತಿಯಲ್ಲಿ ಭೋಧಿಸಿ ಅವರು ಎಲ್ಲ ಸಾಮರ್ಥ್ಯ ಹೊಂದುವಂತೆ ಮಾಡಿ, ಆ ಮಕ್ಕಳಿಗೆ ಇವತ್ತು ಕಲಿಕಾ ಹಬ್ಬ ಕಾರ್ಯಕ್ರಮದಡಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರನ್ನು ಪ್ರೋತ್ಸಾಹಿಸುವ ವೇದಿಕೆ ಇದಾಗಿದೆ ಎಂದು ತಿಳಿಸಿದರು. ಸಿ ಆರ್ ಪಿ, ವಿ ಡಿ ಯಲಗೋಡ ಸ್ವಾಗತಿಸಿದರು, ಶಿಕ್ಷಕರಾದ ಶಂಕರ ಕೊಣ್ಣೂರ ಕಾರ್ಯಕ್ರಮ ನಿರೂಪಿಸಿದರು. ಪ್ರದಾನ ಗುರುಗಳಾದ ಎಂ ಎಸ್ ಮೇಟಿ ವಂದಿಸಿದರು.

