Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೇಕಾರರ ಕಟಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಣ್ಣಾಸಾಹೇಬ ಹವಲೆಯವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ

Advertisement
ನಿಪ್ಪಾಣಿ:  ಬೋರಗಾವ, ಮಾನಕಾಪೂರ, ಕಾರದಗಾ ಸೇರಿ ನಿಪ್ಪಾಣಿ ತಾಲೂಕಿನ ಗಡಿಭಾಗದ ಹಳ್ಳಿಗಳಲ್ಲಿ ನೇಕಾರರ ಮೇಲೆ ಕಳೆದ ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿದ್ದು ಹೆಚ್ಚಾದ ವಿದ್ಯುತ್ ಬಿಲ್ ಗಳಿಂದಾಗಿ ನೇಕಾರರ ವ್ಯವಸಾಯದ ಮೇಲೆ ಅನೇಕ ಸಂಕಟಗಳು ಎದುರಾಗುತ್ತಿವೆ. ಮಾರುಕಟ್ಟೆಯಲ್ಲಿ ಬಟ್ಟೆಗೆ ಬೆಲೆ ಇಲ್ಲದೆ ನೇಕಾರರು ಉತ್ಪಾದಿಸಿದ ಬಟ್ಟೆ ಮಾರಾಟವಾಗದೆ ಸಕಾಲಕ್ಕೆ ಹೆಚ್ಚಾದ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೇ ಬೀದಿಗೆ ಬಂದಿದ್ದಾರೆ. ಅನೇಕ ನೇಕಾರರು ಕೆಲಸವಿಲ್ಲದೆ ತಮ್ಮ ಯಂತ್ರ ಮಗ್ಗುಗಳನ್ನು ಕಬ್ಬಿಣದ ದರದಲ್ಲಿ ಮಾರಾಟ ಮಾಡುವ ಪ್ರಸಂಗ ಬಂದಿದ್ದು ನೇಕಾರರ ಮೇಲೆ ಸರ್ಕಾರ ಹೇರಿದ ಅತಿಯಾದ ವಿದ್ಯುತ್ ಬಿಲ್ ಹಾಗೂ ಕಟಬಾಕಿಯನ್ನು ಮನ್ನಾ ಮಾಡಬೇಕೆಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಣ್ಣಾಸಾಹೇಬ ಹವಲೆಯವರು ಶಾಸಕ ಗಣೇಶ ಹುಕ್ಕೇರಿಯವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಪತ್ರ ಅರ್ಪಿಸಿದರು.



ಚಿಕ್ಕೋಡಿಯಲ್ಲಿ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಂಪರ್ಕಿಸಿ ಮನವಿ ಸಲ್ಲಿಸಿದ್ದರಿಂದ ನೇಕಾರರಲ್ಲಿ ಮತ್ತೆ ಪುನಶ್ಚೇತನ ಉಂಟಾಗಿದ್ದು ಮುಖ್ಯಮಂತ್ರಿಗಳು ಸಹ ಮನವಿ ಸ್ವೀಕರಿಸಿ ಆದಷ್ಟು ಬೇಗ ನೇಕಾರರ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ತಿಳಿಸಿದ್ದರಿಂದ ಕಳೆದ ಅನೇಕ ವರ್ಷಗಳಿಂದ ಬಂದಾಗಿದ್ದ ಯಂತ್ರ ಮಗ್ಗುಗಳಿಗೆ ಪುನಹ ಚಾಲನೆ ದೊರೆಯಲಿದೆ.

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಅರ್ಜುನ ಕುಂಬಾರ, ಬಾವುಸಾಬ ಬಂಕಾಪುರೇ ಅಶೋಕ್ ಹವಲೆ ಶಿವಪ್ಪ ಮಾಳಗೆ ಭಾವುಸಾಹೇಬ ಪಾಟೀಲ ವಿದ್ಯಾಧರ ಅಮ್ಮನ್ನವರ ಮಹದೇವ್ ಸ್ವಾಮಿ, ಜೀವಂಧರ ಕಾರವತೆ, ಧನಪಾಲ ಹವಲೆ, ಸೇರಿದಂತೆ ಮಾನಕಾಪುರ, ಬೋರಾಗಾವ ಪರಿಸರದ ನೇಕಾರರು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ