Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾತಂತ್ರ್ಯದ ಸ್ವಾಭಿಮಾನ ಹೋರಾಟದ ಸಂಕೇತವಾಗಿ ಕಿತ್ತೂರು ಚೆನ್ನಮ್ಮನ ಉತ್ಸವ ಆಚರಣೆ : ಸಿ.ಎಂ ಸಿದ್ದರಾಮಯ್ಯ

Advertisement
ಚನ್ನಮ್ಮ ಕಿತ್ತೂರು: ಕ್ರಾಂತಿ ನೆಲ ಕಿತ್ತೂರಿನಲ್ಲಿ ವೀರರಾಣಿ ಚೆನ್ನಮ್ಮನವರ ವಿಜಯೋತ್ಸವ 2025 ಸಾಲಿನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಾತನಾಡಿ ನಾನು ಅತ್ಯಂತ ಸಂತೋಷದಿಂದ ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಭಾಗಿ ಆಗಿದ್ದೇನೆ. ಕಳೆದ ಉತ್ಸವದಲ್ಲಿ ಬಂದಿದೆ. ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಸಂಗಡಿಗರು ಕಿತ್ತೂರು ಉತ್ಸವ ಸಂಭ್ರಮದ ಕಿತ್ತೂರು ಉತ್ಸವ ಆಚರಿಸುತ್ತಿದ್ದಾರೆ.



1824 ಅಕ್ಟೋಬರ್ 23 ಕಿತ್ತೂರು ರಾಣಿ ಚನ್ನಮ್ಮ ಅವರು ಬ್ರಿಟಿಷರನ್ನು ಸೋಲಿಸುತ್ತಾರೆ. ರಾಣಿ ಚನ್ನಮ್ಮ ಒಬ್ಬ ಸ್ವಾಭಿಮಾನಿ ಹೋರಾಟಗಾರ್ತಿ. ಬ್ರಿಟಿಷರ ತೆರಿಗೆ ಪದ್ದತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲಾ ಎಂಬ ಪದ್ದತಿ ವಿರುದ್ಧವಾಗಿ 1857 ರ ಸಿಪಾಯಿ ದಂಗೆಗೂ ಮುಂಚೆ 1824 ಆಕ್ಟೊಬರ್ 23 ರಂದು ಕಿತ್ತೂರು ಸಂಸ್ಥಾನದ ಸ್ವಾಭಿಮಾನದ ಕಿಚ್ಚಿನ ಹೋರಾಟ ರೂಪಿಸಿದವರು ಚೆನ್ನಮ್ಮನವರು. ನಂತರ ಬ್ರಿಟಿಷ್ ಅವರಿಗೆ ಚನ್ನಮ್ಮ ಶರಣಾಗತಿ ಆಗಬೇಕಿತ್ತು.

ತಾಯಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ್ ಬಾಳಪ್ಪ ಇವರ ಪರಾಕ್ರಮ ಬಹಳ ಇದೆ. ತ್ಯಾಕರೆ ಸಾಯಿಸಿ ಪರಾಕ್ರಮ ಮೆರೆದು ಎರಡನೇ ಭಾರಿ ಸೋಲುತ್ತಾರೆ ಚನ್ನಮ್ಮ . ನಮ್ಮವರೇ ಬ್ರಿಟಿಷನವರಿಗೆ ಸಹಾಯ ಮಾಡಿ ಚನ್ನಮ್ಮನನ್ನು ಬಂಧಿಸಿದ್ದರು. ಕಿತ್ತೂರು ರಾಣಿ ಚನ್ನಮ್ಮ ಅವರನ್ನು ರಾಣಿ ಮಾಡಬೇಕು ಎಂದು ಸಂಗೊಳ್ಳಿ ರಾಯಣ್ಣ ಹೋರಾಟ ಮಾಡುತ್ತಾನೆ.



2017 ರಲ್ಲಿ ಅಧಿಕೃತವಾಗಿ ನಮ್ಮ ಸರ್ಕಾರ ಕಿತ್ತೂರು ಉತ್ಸವಕ್ಕೆ ಆದೇಶ ನೀಡಿತು. ಬ್ರಿಟಿಷರ ವಿರುದ್ಧ ಈ ದೇಶದ ಸ್ವಾತಂತ್ರ್ಯಕ್ಕಾಗಿ ಯುದ್ಧ ಮಾಡಿದ ಭಾರತದ ಪ್ರಥಮ ಮಹಿಳೆ ಆಗಿದ್ದಾರೆ. ಅದಕ್ಕಾಗಿ ಇಂತಹ ವೀರ ಮಹಿಳೆ ಕಿತ್ತೂರು ಚೆನ್ನಮ್ಮನವರ ಉತ್ಸವಕ್ಕಾಗಿ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಬೇಕಾದ ಅನುಧಾನವನ್ನು ಕೊಟ್ಟಿದ್ದೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದಾನೆ ಅದನ್ನು ಹೇಳಿದರೆ ವಿರೋಧಿ ಪಕ್ಷದವರು ಸಿದ್ರಾಮಯ್ಯ ಮುಸ್ಲಿಂ ಪರ ಮಾತಾಡ್ತಾನೆ ಅಂತಾರೆ. ಟಿಪ್ಪು ಒಬ್ಬ ಸ್ವಂತಂತ್ರ್ಯ ಹೊರಟ ಮಾಡಿ ಸಾವನ್ನು ಅಪ್ಪುತ್ತಾನೆ.

ಅಂಬೇಡ್ಕರ್ ಹೇಳತ್ತಾರೆ ಭಾರತ ದೇಶದ ಇತಿಹಾಸ ಗೊತ್ತಿಲ್ಲದವರು ಮುಂದೆ ಬರಲ್ಲ. ಎಲ್ಲ ಧರ್ಮಗಳಲ್ಲಿ ಹಿಂಸೆ ಇಲ್ಲ ಆದರೆ ಬಿಜೆಪಿ ಅವರು ರಾಜಕೀಯ ಮಾಡತಾರೆ, ಅದಕ್ಕಾಗಿ ಜಾತಿ ಹೆಸರಲ್ಲಿ ರಾಜಕೀಯ ಮಾಡಬಾರದು. ಕುತಂತ್ರಿಗಳು ಆಗಲು ಇದ್ದರು, ಈಗಲೂ ಇದ್ದಾರೆ , ಕೇವಲ ಸ್ವಾರ್ಥ್ ಹಿತಶಕ್ತಿಗೆ ಜಾತಿ ಬಳಸ್ತಾರೆ. ಇಂತಹ ಉತ್ಸವಗಳಿಂದ ಚನ್ನಮ್ಮ ತಾಯಿಯ ಇತಿಹಾಸ ದೇಶಕ್ಕೆ ತಿಳಿಸುವ ಯೋಜನೆ ಆಗಿದೆ. ನೇಸರಗಿ ಭಾಗದ ಶ್ರೀ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಗೆ 540 ಕೋಟಿ ರೂ ಗಳ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ.

ಬೈಲಹೊಂಗಲ ಚನ್ನಮ್ಮ ಸಮಾಧಿಗೆ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಬೆಳಗಾವಿ ಏರರ್ಪೋರ್ಟ್ ಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಇಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.ಎಲ್ಲ ಜಾತಿಗಳ ಸಹಬಾಳ್ವೆ ಬದುಕುವದು ನಮ್ಮ ಆಶಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕಳೆದ ವರ್ಷ ತಾಯಿ ಚನ್ನಮ್ಮಾಜಿಯ ಉತ್ಸವ 200 ವರ್ಷ ಆಗಿದ್ದರಿಂದ ಅದ್ದೂರಿಯಾಗಿ ಆಚರಿಸಿದ್ದೇವೆ. ಚನ್ನಮ್ಮ ಸ್ಮಾರಕ ನಿರ್ಮಾಣಕ್ಕೆ ಅನುಧಾನ ನೀಡಲು ಸಿಂಎಂ ಸಿದ್ರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಪಟ್ಟಣದ ಸೌಂದರ್ಯಕರಣಕ್ಕಾಗಿ ಸಚಿವ ಸತೀಶ ಜಾರಕಿಹೊಳಿ ಅನುಧಾನ ನೀಡಿದ್ದಾರೆ.

ಕಬ್ಬುಬೆಳೆಗಾರರೇ ಬೆಳೆಸಿ ಕಟ್ಟಿದ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಅನುದಾನ ನೀಡಬೇಕು. ಮುಖ್ಯಮಂತ್ರಿ ಯವರು ಕಿತ್ತೂರು ಪ್ರಾಧಿಕಾರಕ್ಕೆ ಅನುಧಾನ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ. ಎರಡು ತಿಂಗಳಲ್ಲಿ ತೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ಚಾಲನೆ ಆಗಲಿದೆ ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಕಿತ್ತೂರು ಉತ್ಸವ ಅಧಿಕೃತ ಘೋಷಣೆ ಮಾಡಿದ್ದು ಮುಖ್ಯಮಂತ್ರಿ ಸಿದ್ರಾಮಯ್ಯ, ಸರ್ಕಾರಿ ಕಚೇರಿಗಳಲ್ಲಿ ಅಣ್ಣ ಬಸವಣ್ಣ ಅವರ ಫೋಟೋ ಹಾಕಲು ಅದೇಶಿಸಿದ್ದು ಸಿದ್ರಾಮಯ್ಯ ಅವರು, ಕಿತ್ತೂರು ಉತ್ಸವಕ್ಕೆ ಹೆಚ್ಚಿನ ಅನುಧಾನ ನೀಡಿದವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಈಗ ಬೈಲಹೊಂಗಲ ತಾಯಿ ಚನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ ಕಿತ್ತೂರು ಕಲ್ಮಟದ ಮಡಿವಾಳ ಶ್ರೀ ರಾಜಯೋಗಿಂದ್ರ ಶಿವಯೋಗಿ ಮಹಾಸ್ವಾಮಿಗಳು, ಕಾದರವೋಳ್ಳಿಯ ಡಾ. ಪಾಲಾಕ್ಷ ಶಿವಯೋಗಿಶ್ವರರು, ನಿಚ್ಚನಕಿಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಅಶೋಕ ಪಟ್ಟಣ, ಮಹಾಂತೇಶ್ ಕೌಜಲಗಿ, ಎಚ್ ಎನ್ ಕೋನರೆಡ್ಡಿ, ರಾಜು ಸೆಟ್,ವಿಶ್ವಾಸ ವೈದ್ಯ,ಎಮ್ ಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಸಲೀಮ್ ಅಹಮದ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೀಮಾಶಂಕರ ಗುಳ್ಳೆದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂದೆ, ಹೆಸ್ಕಾo ಎಂ.ಡಿ ಅಜಿಮ್ ಪೀರ್ ಖಾದ್ರಿ, ಲಕ್ಷ್ಮಣರಾವ ಚಿಂಗಳೆ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ವಿನಯ ನವಲಗಟ್ಟಿ,ಬೆಳಗಾವಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾವತಿ ಭಜಂತ್ರಿ, ಉಪವಿಭಾಧಿಕಾರಿ ಪ್ರವೀಣ ಜೈನ, ಡಾ. ವಿಜಯ ವಕ್ಕುಂದ ಆರ್ ಸಿ ಯು ನ ಕುಲಪತಿ ಸಿ ಎಮ್ ತ್ಯಾಗರಾಜ ಉಪಸ್ಥಿತರಿದ್ದರು.

ವರದಿ: ಬಸವರಾಜು
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ